ದಾವಣಗೆರೆ; ಮಳೆ ಕೊರತೆ ಹಿನ್ನೆಲೆ ಭದ್ರಾ ಡ್ಯಾಂ ನಿಂದ ನಾಲೆಗೆ ಹರಿಸುವ ನೀರು ನಿಲ್ಲಿಸುತ್ತಾರೆಂಬ ಆತಂಕ ಬೇಡ.ರೈತರು ಯಾವ ವದಂತಿಗಳಿಗೆ ಕಿವಿ ಕೊಡದೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ಬೆಳೆಗಳಿಗೆ ಜಲ ಸಂಪನ್ಮೂಲ ಇಲಾಖೆಯ ಸೂಚನೆ ಮೇರೆಗೆ 100 ದಿನ ನೀರು ಹರಿಸುವ ಬಗ್ಗೆ ಭದ್ರಾ ಅಧೀಕ್ಷಕ ಅಧಿಸೂಚನೆಯನ್ನು ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಆ ಪ್ರಕಾರ ಈಗಾಗಲೇ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ
ಆಗಿದೆ. ರೈತರು ಯಾವ ವದಂತಿಗಳಿಗೆ ಕಿವಿ ಕೊಡದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುಬೇಕು ಎಂದರು.
ನಾವು ರೈತರ ಪರವಾಗಿದ್ದು, ನೀರು ನಿಲ್ಲಿಸುತ್ತಾರೆಂಬ ಬಗ್ಗೆ ಯಾರಿಗೂ ಆತಂಕ ಬೇಡ. ಇನ್ನೂ ಮಳೆಗಾಲ ಇರುವುದರಿಂದ ಮಳೆದೇವ ಕೃಪೆಯಿಂದ ಜಲಾಶಯ 4-5 ದಿನಗಳಲ್ಲಿ ತುಂಬಲಿದೆ. ಈ ಬಗ್ಗೆ ನಮಗೆ
ಇನ್ನೂ ವಿಶ್ವಾಸ ಇದೆ ಎಂದರು. ಇನ್ನೂ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ನಾಲೆ ನೀರು ನಿಲ್ಲಿಸದಂತೆ ಮನವಿ ಮಾಡಿದ್ದಾರೆ.