ದಾವಣಗೆರೆ: 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜಲಸಿರಿ ಯೋಜನೆ ವತಿಯಿಂದ ಕೆ.ಐ.ಯು.ಡ.ಬ್ಲೂ.ಎಂ.ಐ.ಪಿ ಯೋಜನೆಯಡಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 3 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-9 ಪಿ.ಜೆ ಬಡಾವಣೆ ಫೀಡರ್ ವ್ಯಾಪ್ತಿಯ ಪೋಲಿಸ್ ವಸತಿ ಗೃಹ, ಡಿ.ಎ.ಪಿ.ಆರ್ ಆಫೀಸ್, ಅರುಣ ಟಾಕೀಸ್ ವೃತ್ತ, ಹಳೆ ವಾಣಿಹೊಂಡ ಶೊರೂಂ, ಪಶುಸಂಗೋಪನ ಆಸ್ಪತ್ರೆ, ಮಜಿದ್ ಮಸೀದಿ, ಸಿತಾರ ಹೋಟಲ್, ಜಿ.ಎಂ.ವಾಲ್, ಫಿಶ್ ಮಾರ್ಕೆಟ್, ಪಿಸಾಳೆ ಕಾಪೌಂಡ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್18-ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಂ.ಬಿ ಕೇರಿ, ಹೊಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇಡಬ್ಲ್ಯೂಎಸ್ ಕಾಲೋನಿ, ಹಳೇಪೇಟೆ, ಬಾರ್‍ಲೈನ್‍ರಸ್ತೆ, ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



