ದಾವಣಗೆರೆ; ಆಸ್ತಿ ವಿವಾದ ಹಿನ್ನೆಲೆ 10 ವರ್ಷದ ಫಲಕ್ಕೆ ಬಂದಿದ್ದ 350 ಅಡಿಕೆ ಮರಗಳನ್ನು ಜೆಸಿಬಿ ಮೂಲಕ ಬುಡ ಸಮೇತ ಕಿತ್ತು ಹಾಕಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಆನಂದ ಎಂಬ ರೈತನ ಅಡಿಕೆ ಮರಗಳು ನಾಶವಾಗಿವೆ. ಈ ಪ್ರಕರಣ ಕುರುತು ಐವರ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಸಿಬಿ ಬಳಸಿ ಸುಮಾರ 10 ವರ್ಷದ ಅಡಿಕೆ ಮರಗಳನ್ನು ಸರ್ವನಾಶ ಮಾಡಿದ್ದಾರೆ. ಹಲವು ವರ್ಷಗಳಿಂದ ಅಕ್ಕಪಕ್ಕ ತೋಟದ ರೈತರ ನಡುವೆ ನಡುವೆ ಜಗಳವಿತ್ತು.
ಈ ಘಟನೆ ನನ್ನ ಕಣ್ಣ ಮುಂದೆಯೇ ನಡೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾದಾಗ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ತೋಟದ ಮಾಲೀಕ ಆನಂದ ಆರೋಪ ಮಾಡಿದ್ದಾರೆ.ಅಡಿಕೆ ತೋಟ ನಮ್ಮ ಅನುಭವದಲ್ಲಿದ್ದು, ಏಕಾಏಕಿ ಆರೋಪಿಗಳು ಜೆಸಿಬಿ ತಂದು, ಅಡಿಕೆ ಮರಗಳ ನಾಶ ಮಾಡಿದ್ದಾರೆ ತೋಟದಲ್ಲಿದ್ದ ಬೋರ್ವೆಲ್ ಸಹ ಹಾಳು ಮಾಡಿದ್ದಾರೆ. ಪ್ರಕರಣ ಸಂಬಂಧ ರೈತ ಆನಂದ, ಕಣದಮನಿ ಸುರೇಶ ಹಾಗೂ ಜಗದೀಶ ಸೇರಿದಂತೆ ಒಟ್ಟು ಐವರ ವಿರುದ್ಧ ದೂರು ದಾಖಲಿಸಿದ್ದಾರೆ.
ಘಟನೆಯಿಂದ ತನಗೆ ಪ್ರಾಣಭಯವಿದ್ದು, ಪೊಲೀಸರು ರಕ್ಷಣೆ ನೀಡಬೇಕು ತೋಟದ ಮಾಲೀಕ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಲೇಬೆನ್ನೂರು ಪೋಲಿಸ್ ಠಾಣೆಯ ಪೋಲಿಸರು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.