ದಾವಣಗೆರೆ: ಅಡಿಕೆ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 6.90 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ ಬುಲೇರೋ ವಾಹನ ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ತಮ್ಮ ಅಡಿಕೆ ಖೇಣಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 41 ಅಡಿಕೆ ಚೀಲವನ್ನು ಯಾರೋ ಕಳ್ಳರುಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರಿನ ಮೇರೆಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ಡಿವೈಎಸ್ ಪಿ ಡಾ. ಸಂತೋಷ್ ಕೆ.ಎಂ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷ ಮಹೇಶ್ ಇ.ಎಸ್ ನೇತೃತ್ವದಲ್ಲಿ ಪಿ.ಎಸ್.ಐ. ಮೊಹಮ್ಮದ್ ಸೈಫುದ್ದೀನ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ 25-07-2023 ರಂದು ಆರೋಪಿಗಳಾದ 1)ಕಾರ್ತಿಕ್ ಹೆಚ್.ಎಸ್. 28 ವರ್ಷ, ಶೆಟ್ಟಿ ಹಳ್ಳಿ ಗ್ರಾಮ
ಶಿವಮೊಗ್ಗ ಜಿಲ್ಲೆ, 2) ಜಾವೀದ್ ಅಲಿ, 28 ವರ್ಷ, ಕೂಲಿ ಕೆಲಸ ವಾಸ: ಕರೆಕಟ್ಟೆ ಗ್ರಾಮ ಚನ್ನಗಿರಿ ತಾಲ್ಲೂಕು, 3)ಅಮೀರ್ ಜಾನ್, 24 ವರ್ಷ, ಕೂಲಿ ಕೆಲಸ ವಾಸ: ಹೊಸೂರು ಕೆರೆಬಿಳಚಿ ಗ್ರಾಮ ಚನ್ನಗಿರಿ ತಾಲ್ಲೂಕು ಇವರುಗಳನ್ನು ಬಂಧಿಸಲಾಗಿದೆ.
ಆರೋಪಿತರಿಂದ 41 ಚೀಲ ಅಡಿಕೆ ಕಳ್ಳತನ ಮಾಡಿ ಮಾರಾಟ ಮಾಡಿ ಸಂಗ್ರಹಿದ್ದ ಒಟ್ಟು 6,90,000/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಬುಲೇರೋ ಪಿಕಪ್ ವಾಹನವನ್ನು ಜಪ್ತಿ
ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಈ.ಎಸ್., ಪಿ.ಎಸ್.ಐ. ಸೈಫುದ್ದೀನ್. ಎ.ಎಸ್.ಐ. ಶಶಿಧರ ಹೆಚ್.ಎನ್ ಸಿಬ್ಬಂದಿಯವರಾದ ರಂಗಪ್ಪ, ಬಿರೇಶ್ ಪುಟ್ಟಕ್ಕನವರ್, ಹರೀಶ್ ಕುಮಾರ್ ಜಿ.ಎಸ್ ಅವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಕೆ. ಅರುಣ್ ಕೆ ಶ್ಲಾಘಿಸಿದ್ದಾರೆ.



