ದಾವಣಗೆರೆ: ಒಬ್ಬ ಆರೋಪಿಯಿಂದ ವಿವೋ ಕಂಪನಿಯ ನೀಲಿ ಬಣ್ಣದ ಮೊಬೈಲ್ ವಶಪಡಿಸಿಕೊಂಡಿದ್ದು, ಮೊಬೈಲ್ ಮಾಲೀಕರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಗೆ ಅಥವಾ ವಸಂತ ಟಾಕೀಸ್ ರಸ್ತೆಯಲ್ಲಿರುವ ಆಜಾದ್ ನಗರ ವೃತ್ತ ಕಚೇರಿ ತನಿಖಾಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಲು ಆಜಾದ್ ನಗರ ಪೊಲೀಸ್ ವೃತ್ತ ನಿರೀಕ್ಷಕ ಗಜೇಂದ್ರಪ್ಪ ಕೆ.ಎನ್ ತಿಳಿಸಿದ್ದಾರೆ.
ನಗರದ ಬಾಡಾಕ್ರಾಸ್ ಬ್ರಿಡ್ಜ್ ಸಮೀಪದ ಎನ್.ಹೆಚ್. 48 ರಸ್ತೆ ಪಕ್ಕದ ಕಲಪನಹಳ್ಳಿ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಅನುಮಾನಾಸ್ಪದ ವ್ಯಕ್ತಿಯಿಂದ ವಿವೋ ಕಂಪನಿಯ ನೀಲಿ ಬಣ್ಣದ ಮೊಬೈಲ್ ವಶಪಡಿಸಿಕೊಂಡಿದ್ದು, ಮೊಬೈಲ್‍ಗೆ ಪ್ಯಾರ್ಟನ್ ಇದ್ದು, ಸಿಮ್ ಕೂಡಾ ಇಲ್ಲವಾದ್ದರಿಂದ ಮೊಬೈಲ್ ಮಾಲೀಕರು ಪತ್ತೆಯಾಗದ ಕಾರಣ ಠಾಣೆಗೆ ದೂರು ಸಲ್ಲಿಸಲು ತಿಳಿಸಿದ್ದಾರೆ.



