ದಾವಣಗೆರೆ: ಅಕ್ರಮ ಆರೋಪ ಹಿನ್ನೆಲೆ ದಾವಣಗೆರೆ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಸುನಿತಾ ಸಿ. ಅಮಾನತು ಮಾಡಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.
ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ಖಾತಾ ಉತಾರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ ಆಅರೋಪ ಸುನಿತಾ ಮೇಲಿತ್ತು. ಇವರು ಡೋರ್ ನಂ 1882/81ಎ ನಲ್ಲಿ ಡಿ.ಎಲ್. ರಾಮಚಂದ್ರಪ್ಪ ಬಿನ್ ಧರ್ಮಪ್ಪ ಎಂಬುವವರ ಹೆಸರಿಗೆ ಮೇಲಾಧಿಕಾರಿಗಳ ಆದೇಶವಿಲ್ಲದ ಹಾಗೂ ಯಾವುದೇ ಅಧಿಕೃತ ಷರಾ ಇಲ್ಲದೇ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದರು. ಖಾತೆ ಸೇರಿಸಲು ಯಾವುದೇ ಮೂಲ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸದೇ ದಿನಾಂಕ:11-08-2022 ರಂದು ನಮೂನೆ-3 ನೀಡಿದ್ದರು.
ಸದರಿ ಖಾತಾ ಎಕ್ಸ್ ಟ್ರ್ಯಾಕ್ ಆಧಾರದ ಮೇಲೆ ಶಸುಧಾ ಬಿ ಕೋಂ ಲಕ್ಷ್ಮೀಪತಿ ಆರ್ ಎಲ್ ಹಾಗೂ ಪೂಜಾ ಟಿ ಕೋಂ ಶಿವಪ್ರಕಾಶ್ ಆರ್ ಎಂಬುವವರು ಸಬ್ ರಜಿಸ್ಟಾರ ಕಚೇರಿಯಲ್ಲಿ ದಿನಾಂಕ:15-08-2022 ರಂದು ದಾನ ಪತ್ರದ ಆಧಾರದ ಮೇಲೆ ನೋಂದಾವಣೆ ಮಾಡಿಸಿಕೊಂಡು, ದಿನಾಂಕ-12-10-2022 ರಂದು ಖಾತಾ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಾರ್ಡ ನಂಬರ್-20 ರ ಸಾರ್ವಜನಿಕರು, ಆಯುಕ್ತರಿಗೆ ದೂರು ನೀಡಿದ್ದರು. ಸ.ನಂ. 51 ರ ಉದ್ಯಾನವನ ಜಾಗವನ್ನು ಖಾಸಗಿ ವ್ಯಕ್ತಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸದರಿ ಸ್ವತ್ತನ್ನು ಯಾವುದೇ ಕಾರಣಕ್ಕೂ ಖಾತೆ ಮಾಡಬಾರದೆಂದು ದೂರನ್ನು ಸಲ್ಲಿಸಿದ್ದರು.
ಈ ಬಗ್ಗೆ ತನಿಖೆಮಾಡಿ ವರದಿ ನೀಡುವಂತೆ ಉಪ ಆಯುಕ್ತರು(ಕಂದಾಯ) ಹಾಗೂ ಎಸ್ಟೇಟ್ ಆಫೀಸರ್ ಗೆ ಆಯುಕ್ತರು ಆದೇಶಿದ್ದರು. ಇದೀಗ ತನಿಖಾ ವರದಿ ಸಲ್ಲಿಸಿದ್ದು, ಸುನಿತಾ ಮೇಲಾಧಿಕಾರಿ ಆದೇಶ ಇಲ್ಲದೆ, ಖಾತೆ ಪುಸ್ತಕದಲ್ಲಿ ಹೆಸರು ಸೇರಿಸಿದ್ದರು.



