Connect with us

Dvgsuddi Kannada | online news portal | Kannada news online

ದಾವಣಗೆರೆ: CEIR Portal ಸಹಾಯದಿಂದ ಕಳ್ಳತನವಾಗಿದ್ದ 10 ಮೊಬೈಲ್‌ ಪತ್ತೆ; ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸ್

IMG 20230629 WA0001

ದಾವಣಗೆರೆ

ದಾವಣಗೆರೆ: CEIR Portal ಸಹಾಯದಿಂದ ಕಳ್ಳತನವಾಗಿದ್ದ 10 ಮೊಬೈಲ್‌ ಪತ್ತೆ; ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸ್

ದಾವಣಗೆರೆ: ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್‌ಫೋನ್‌ಗಳನ್ನು CEIR Portal ನಲ್ಲಿ ಮೊಬೈಲ್‌ನ ವಾರಸುದಾರರ ವಿವರಗಳನ್ನು ನಮೂದು ಮಾಡಿ, ಮೊಬೈಲ್‌ನ ಐಎಂಇಐ ನಂಬರ್‌ನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ / ಕಳುವಾದ ಮೊಬೈಲ್‌ಗಳ ಪೈಕಿ 10 ಮೊಬೈಲ್‌ಗಳನ್ನು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಲಾಗಿದೆ.

ಮೊಬೈಲ್ ವಾರಸುದಾರರಾದವಿರುಪಾಕ್ಷಿ, ಸ್ವರೂಪ್ ದುರುಗೋಜಿ, ರಮೇಶ, ಎನ್ ಪಿ ಹಿರೇಮಠ, ಗುಡ್ಡಾಚಾರಿ, ಜಯರಾಮ್ ಶೆಟ್ಟಿ, ನಜರುಲ್ಲಾ, ಶಿವಾನಂದಪ್ಪ, ಹನುಮಂತಪ್ಪ, ಅನೀಲ್ ಹರಿಬಾಬು ಇವರಿಗೆ ವಾಪಾಸ್ಸು ಹಿಂದಿರುಗಿಸಲಾಗಿರುತ್ತದೆ. ಪತ್ತೆಯಾದ ಮೊಬೈಲ್‌ಗಳ ಅಂದಾಜು ಮೊತ್ತ 1,60,000/- ರೂಗಳು ಆಗಿರುತ್ತದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ, ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ದೇವಾನಂದ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಡಿ.ಹೆಚ್ ಸಿರಿಗೆರೆ, ಮಂಜಪ್ಪ ಕ್ಯಾತಮ್ಮನವರ್, ರಿಜ್ವಾನ್ ನಾಸೂರ್ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಈ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top