ಡಿವಿಜಿ ಸುದ್ದಿ, ಕೋಲಾರ: ಜೆಡಿಎಸ್‍ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದು, ಈ ಮೂಲಕ ಶ್ರೀನಿವಾಸಪುರದಲ್ಲಿ ವೈರಿಗಳ ಜಿದ್ದಾಜಿದ್ದು ಮುಂದುವರಿದಿದೆ.
ವಿಧಾನಸೌಧದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟಿನಲ್ಲಿ ಮಾಜಿ ಶಾಸಕರು ನನ್ನ ಮಾನಹಾನಿ ಮಾಡಿದ್ದಾರೆ ಎಂದು ಮಾನನಷ್ಟ ಕೇಸ್ ದಾಖಲಿದ್ದಾರೆ.
ವಕೀಲರಾದ ಶಂಕರಪ್ಪ, ಸುಂದರ್ ಅವರೊಂದಿಗೆ ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟ್ ಗೆ ಆಗಮಿಸಿದ ರಮೇಶ್ ಕುಮಾರ್, ಜೆ.ಕೆ. ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕ್ಕದಮ್ಮೆ ದಾಖಲಿಸಿದ್ದಾರೆ. ಜೆಡಿಎಸ್‍ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಎದುರಾಳಿಗಳು.



