ದಾವಣಗೆರೆ; ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬೆನ್ನೂರು ಗ್ರಾಮದವರಾದ ವಿಸ್ಮಿತಾ ಎಸ್. ಪಾಟೀಲ ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯ ಪಿಎಚ್‍ಡಿ. ಪದವಿ ಪ್ರಧಾನ ಮಾಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಮತ್ತು ಪ್ರಸ್ತುತ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲ್ಸೆ ಅವರ ಮಾರ್ಗದರ್ಶನ ಮತ್ತು ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಎನ್.ಕಳಸದ ಅವರ ಸಹಮಾರ್ಗದರ್ಶನದಲ್ಲಿ ವಿಸ್ಮಿತಾ ಅವರು ‘ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಜೇಷನ್ ಆಫ್ ಪಾಲಿಮರ್ ಕಾಂಪೋಸಿಟ್ಸ್’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು.



