ಬೆಂಗಳೂರು: ವಿದ್ಯುತ್ ದರ ಕಡಿಮೆ ಆಗಲ್ಲ. ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸರಿಯಾಗಿ ಬರುತ್ತದೆ. ಕಾದು ನೋಡಿ ಎಂದಿದ್ದಾರೆ. ವಿದ್ಯುತ್ ದರ ಏರಿಕೆ ಖಂಡಿಸಿ ಎಫ್ ಕೆ ಸಿಸಿಐ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಎಫ್ ಕೆ ಸಿಸಿಐ ಜೊತೆಗೆ ಮಾತನಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡಲು ಖರೀದಿಯಲ್ಲಿ ಸರ್ಕಾರ ತೊಡಗಿದೆ. ರಾಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಇದೆ. ಪ್ರತಿ ಕೆಜಿಗೆ 55 ರೂಪಾಯಿ, ಎಫ್ ಸಿಐ ಪ್ರತಿ ಕೆಜಿಗೆ 36.60 ದರ ನಿಗದಿಯಲ್ಲಿ ಕೊಡಲು ಹೇಳಿತ್ತು. ಆದರೆ, ಕೊಟ್ಟಿಲ್ಲ. ಸೋನಾ ಮಸೂರಿ ಅಕ್ಕಿಯನ್ನು ಕೊಡಲಾಗುತ್ತಾ ಎಂದ್ರು.