ದಾವಣಗೆರೆ: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಶಕ್ತಿ ಯೋಜನೆಗೆ ಸರ್ಕಾರದ ಷರತ್ತಿನ ವಿರುದ್ಧ ಮಾಜಿ ಸಚಿವ, ಶಾಸಕ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನಂತರ ಮಾತನಾಡಿ, ಗುರುತಿನ ಚೀಟಿ ಇರುವವರು ಮಾತ್ರ ಬಸ್ ನಲ್ಲಿ ಓಡಾಡಬೇಕು ಅನ್ನೋದು ತಪ್ಪು. ನೋಡಿದ ತಕ್ಷಣ ಹೆಂಗಸರು ಯಾರು, ಗಂಡಸರು ಯಾರು ಅಂತ ಗೊತ್ತಾಗುತ್ತೆ. ಇವರಿಗೆ ಮತ್ಯಾಕೆ ಗುರುತಿನ ಚೀಟಿ. ಗುರುತಿನ ಚೀಟಿ ಇಟ್ಕೊಂಡು ಓಡಾಡಬೇಕು ಅಂತ ಷರತ್ತು ಹಾಕಿದ್ದು ಸರಿ ಅಲ್ಲ ಎಂದು ಹೇಳಿದರು.
ಕೆಎಸ್ ಆರ್ ಟಿಸಿ ಸಂಸ್ಥೆ ಲಾಭದಲ್ಲಿದೆ. ಹೊರ ರಾಜ್ಯದ ಮಹಿಳೆಯರು ಕೂಡ ರಾಜ್ಯದಲ್ಲಿ ಫ್ರೀ ಓಡಾಡಲು ಅವಕಾಶ ಕೊಡಬೇಕು. ನಾನು ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದರು.



