ದಾವಣಗೆರೆ: ವರದಕ್ಷಣೆ ಕಿರುಕುಳ ನೀಡಿ, ಪತ್ನಿಯನ್ನೇ ಹತ್ಯೆ ಮಾಡಿ ಕುಟುಂಬ ಸಮೇತ ಪತಿರಾಯ ಪರಾರಿಯಾದ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ನಡೆದಿದೆ. ಅನಿತಾ (28) ಹತ್ಯೆಯಾದ ಗೃಹಿಣಿ.ಪತಿಯ ಅಕ್ರಮ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದಿಂದ ಪತ್ನಿ ದಾರುಣ ಅಂತ್ಯಕಂಡಿದ್ದಾಳೆ. ಐದು ವರ್ಷಗಳ ಹಿಂದೆಯಷ್ಟೇ ಅನಿತಾ ಅಶೋಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಇವರಿಗೆ ಇಬ್ಬರು ಪುಟ್ಟ ಮಕ್ಕಳು ಅಮ್ಮನ ಪ್ರೀತಿಯಿಂದ ವಂಚಿತರಾಗಿದ್ದಾರೆ. ಅಶೋಕನಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ಕಿರುಕುಳ ನೀಡಿ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಅನಿತಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಈ ಘಟನೆ ನಂತರ ಅಳಿಯ ಮತ್ತು ಅವರ ಕುಟುಂಬಸ್ಥರು ವಿರುದ್ಧ ಪೋಷಕರು ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಕುಟುಂಬಸ್ಥರ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.