ದಾವಣಗೆರೆ: ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದೆ. ಗೆಲ್ಲುವ ಅಭ್ಯರ್ಥಿ ಪರ ಬಾಜಿ ಕಟ್ಟುವುದು ಎಲ್ಲೆಡೆ ಜೋರಾಗಿದೆ. ಜಿಲ್ಲೆಯ ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡರು ಗೆಲ್ಲಲಿದ್ದಾರೆಂದು ಅಭಿಮಾನಿಯೊಬ್ಬ ಎರಡು ಎಕರೆ ಜಮೀನು ಬಾಜಿಗಿಟ್ಟಿದ್ದಾನೆ.
ಬಾಜಿ ಕಟ್ಟುವವರಿದ್ದರೆ ಬನ್ನಿ ಅಂತ ಡಂಗುರ ಸಾರಿ ಪಂಥಾಹ್ವಾನ ನೀಡಲಾಗಿದೆ.ತಾಲೂಕಿನ ಚಿಕ್ಕಗೋಣಿಗೆರೆ ಗ್ರಾಮದ ಹೆಬ್ಬಾರ ನಾಗಣ್ಣ ಎರಡು ಎಕರೆ ಜಮೀನು ಬಾಜಿಗಿಟ್ಟು ಆಹ್ವಾನ ನೀಡಿದ್ದಾನೆ. ಡಿ.ಜಿ.ಶಾಂತನಗೌಡ ಗೆಲ್ಲುತ್ತಾರೆ ಅಂತ 2 ಎಕರೆ ಜಮೀನನ್ನು ಪಣಕ್ಕೆ ಇಟ್ಟಿದ್ದಾನೆ. ಬಾಜಿ ಕಟ್ಟುವವರು ಚಿಕ್ಕಗೋಣಿಗೆರೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬರುವಂತೆ ಡಂಗುರ ಸಾರಿಸಿ ಪಂಥಾಹ್ವಾನ ನೀಡಿದ್ದಾನೆ.
ಜಿಲ್ಲೆಯ ಜಿದ್ದಾಜಿದ್ದಿನ ಕಣಗಳಾದ ಚನ್ನಗಿರಿ-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿದೆ. ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಅಜಯ ಕುಮಾರ್ ಪರ ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ಚನ್ನಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಪರ ಹಣ ಕಟ್ಟುತ್ತಿದ್ದಾರೆ.



