ದಾವಣಗೆರೆ: ಜಗಳೂರು ವಿಧಾನಸಭಾ ಚುನಾವಣೆ ನಿಮಿತ್ತ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯ ಹುಚ್ಚಂಗಿಪುರ ಗ್ರಾಮದಲ್ಲಿ ಬೆಳಗಿನ ಜಾವ ರೌಂಡ್ಸ್ ಮಾಡುತ್ತಿರುವಾಗ ಹುಚ್ಚಂಗಿಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಯಾರೋ ಜನರು ಗುಂಪಾಗಿ ನಿಂತುಕೊಂಡಿದ್ದರು. ಅವರ ಹತ್ತಿರ ಹೋಗುತ್ತಿದ್ದಂತೆ ಎಲ್ಲರೂ ಆ ಜಾಗದಿಂದ ಹೋಗಿದ್ದು, ಜನರು ನಿಂತಿದ್ದ ಸ್ಥಳದಲ್ಲಿ 500/- ರೂ ಮುಖಬೆಲೆಯ 42 ನೋಟುಗಳು (ಒಟ್ಟು 21000/- ನಗದು ಹಣ) ದೊರೆತಿದೆ. ಈ ಹಣ ಯಾರದು ಎಂದು ತಿಳಿದು ಬಂದಿರುವುದಿಲ್ಲ ಎಂದು ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



