ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ನಗರದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿ ಆರ್.ಚೇತನಾ 625ಕ್ಕೆ 624 ಅಂಕ ಗಳಿಸಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಚೇತನಾ ದಾವಣಗೆರೆ ನಿಟುವಳ್ಳಿ ನಿವಾಸಿ ರಘುನಾಥ ಡಿ. ಜಗತಾಪ್-ರೇಣುಕಾಬಾಯಿ ದಂಪತಿಯ ಪುತ್ರಿಯಾಗಿದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ 125, ಇಂಗ್ಲಿಷ್,ಹಿಂದಿ, ಗಣಿತ, ಸಮಾಜವಿಜ್ಞಾನ ವಿಷಯದಲ್ಲಿ ಪೂರ್ಣ 100 ಅಂಕ ಗಳಿಸಿರುವ ಚೇತನಾ, ವಿಜ್ಞಾನ ವಿಷಯದಲ್ಲಿ 99 ಅಂಕ ಪಡೆದಿದ್ದು, ವಿಜ್ಞಾನ ವಿಷಯದಲ್ಲಿ ಮಾತ್ರ ಒಂದು ಅಂಕ ಕಡಿಮೆ ಬಂದಿದೆ.ವೇಳಾಪಟ್ಟಿ ಹಾಕಿಕೊಂಡು ಶ್ರಮಪಟ್ಟು ಓದಿದರೆ ಉತ್ತಮ ಅಂಕಗಳನ್ನು ಪಡೆಯುವುದು ಕಷ್ಟವಲ್ಲ. ನಾನು ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು, ಭಾರತೀಯ ವಿದೇಶಾಂಗ ಸೇವೆಗೆ ಸೇರುವ ಆಸೆ ಇದೆ ಎಂದಿದ್ದಾರೆ.