ದಾವಣಗೆರೆ: 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.75.72ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ 21ನೇ ಸ್ಥಾನ ಗಳಿಸಿದೆ. ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಬಿ. ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ591 ಅಂಕಗಳನ್ನು ಗಳಿಸುವ ಮೂಲಕ ದಾವಣಗೆರೆ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ6ನೇ ಬ್ಯಾಂಕ್ ಪಡೆದಿದ್ದಾರೆ.
ಪೂಜಾ ನಗರದ ಅನೆಕೊಂಡದ ನಿವಾಸಿ ಬಸವರಾಜ್ ಅವರ ಪುತ್ರಿ. ಸತತ ಆರು ಗಂಟೆ ಅಭ್ಯಾಸ ಮಾಡಿ ಗರಿಷ್ಠ ಅಂಕ ಗಳಿಸಿದ್ದೇನೆ ಎಂದಿರುವ ಪೂಜಾ ವೈದ್ಯೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕನ್ನಡ- 97, ಇಂಗ್ಲಿಷ್- 96, ಭೌತಶಾಸ್ತ್ರ- 69, ರಸಾಯನಶಾಸ್ತ್ರ-70, ಗಣಿತ-100 ಅಂಕ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಪರೀಕ್ಷೆಗೆ ಕುಳಿತಿದ್ದ 17,168 ವಿದ್ಯಾರ್ಥಿಗಳ ಪೈಕಿ 12,999 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 2149 ವಿದ್ಯಾರ್ಥಿಗಳಲ್ಲಿ 1135 ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಲ್ಲಿ 10263 ವಿದ್ಯಾರ್ಥಿನಿಯರಲ್ಲಿ 9391 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಶೇ.88.47, ವಾಣಿಜ್ಯ ವಿಭಾಗದಲ್ಲಿ ಶೇ.72.39 ಹಾಗೂ
ಕಲಾ ವಿಭಾಗದಲ್ಲಿ ಶೇ.54.54 ಫಲಿತಾಂಶ ಲಭಿಸಿದೆ.ಕಳೆದ ಬಾರಿ ಜಿಲ್ಲೆಗೆಶೇ.62.72 ರಷ್ಟು ಫಲಿತಾಂಶ ಬಂದಿದ್ದು, ಈ ಸಲಶೇ.75.72ರಷ್ಟು ಫಲಿತಾಂಶ ಬಂದಿದೆ.
ಕಳೆದ ಸಲಕ್ಕಿಂತ ಶೇ.13 ರಷ್ಟು ಫಲಿತಾಂಶ ಹೆಚ್ಚಾಗಿ ರಾಜ್ಯ ಮಟ್ಟದಲ್ಲಿ ಕಳೆದ ಬಾರಿ 19ನೇ ಸ್ಥಾನ ಗಳಿಸಿದ್ದ ದಾವಣಗೆರೆ ಜಿಲ್ಲೆ ಈ ಸಲ 21 ನೇ ಸ್ಥಾನಕ್ಕೆ ಕುಸಿದಿದೆ. ನಗರ, ಗ್ರಾಮೀಣ ಭಾಗದಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.



