ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದೆ. ಏಪ್ರಿಲ್ ಆರಂಭದಲ್ಲಿ ಕುಸಿತದಲ್ಲಿದ್ದ ಬೆಲೆ ಈಗ ಏರಿಕೆಯತ್ತ ಮುಖ ಮಾಡಿದೆ. ಇದರಿಂದ ಅಡಿಕೆ ಬೆಳೆದ ರೈತರಲ್ಲಿ ಸಂತಸ ಉಂಟು ಮಾಡಿದೆ. ಇದೀಗ ಪ್ರತಿ ಕ್ವಿಂಟಾಲ್ ಬೆಲೆ 47 ಸಾವಿರ ಗಡಿ ತಲುಪಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಏ.14 ರಂದು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46,821ರೂ.ಗೆ ಮಾರಾಟವಾಗಿದೆ. ನಿನ್ನೆ 46,099 ರೂ.ಗೆ ಮಾರಾಟವಾಗಿತ್ತು. ಉತ್ತಮ ರಾಶಿಯ ಕನಿಷ್ಠ ಬೆಲೆ 45,599 ಆಗಿದ್ದು, ಗರಿಷ್ಠ ಬೆಲೆ 46,821 ಹಾಗೂ ಸರಾಸರಿ ಬೆಲೆ 46,421ರೂ. ಆಗಿದೆ.