ದಾವಣಗೆರೆ: ಯುವತಿ ಬಲಿ ಪಡೆದ ಆನೆ ಹಿಡಿಯಲು ಬಂದಿದ್ದ ವೈದರ ಮೇಲೂ ಪುಂಡಾನೆ ದಾಳಿ ಮಾಡಿತ್ತು. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಕ್ರೆಬೈಲು ಆನೆ ಬಿಡಾರದ ಹಿರಿಯ ವೈದ್ಯಾಧಿಕಾರಿ ಡಾ.ವಿನಯ್‌ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗುತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಕಾಡಾನೆಗೆ ಅರಿವಳಿಕೆ ಔಷಧವನ್ನು ನೀಡಲು ಹತ್ತಿರ ಹೋದಾಗ ಸೊಂಡಿಲಿಂದ ಡಾ.ವಿನಯ್ ಮುಖಕ್ಕೆ ಬಡಿದಿತ್ತು. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ
ಸದ್ಯ ವಿನಯ್ ಸ್ಥಿತಿ ಗಂಭೀರವಾಗಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೀರೋ ಟ್ರಾಫಿಕ್‌ನಲ್ಲಿ ಎರಡು ಆಂಬ್ಯುನೆಲ್ಸ್ ಮೂಲಕ ಕರೆತರಲಾಗಿದೆ. ಡಾ.ವಿನಯ್ ಜತೆ ಕುಟುಂಬಸ್ಥರು ಪ್ರಯಾಣ ಬೆಳೆಸಿದ್ದಾರೆ.
ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಬಾಲಕಿಯೊಬ್ಬಳನ್ನು ಕಾಡಾನೆಯೊಂದು ಕೊಂದು ಹಾಕಿತ್ತು. ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಶತಪ್ರಯತ್ನ ನಡೆಸಿತ್ತು. ಈ ನಡುವೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ವೈದ್ಯರನ್ನೇ ಆನೆಯು ಸೊಂಡಿಲಿನಿಂದ ಎತ್ತಿ ಎಸೆದಿತ್ತು. ಕಳೆದ ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ (ಏ.11) ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದ ಬಳಿ ಪುಂಡ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಪುಂಡಾನೆಯ ದಾಂಧಲೆಗೆ ಕವನ (17) ಎಂಬ ಬಾಲಕಿ ಬಲಿಯಾಗಿದ್ದಳು.



