Connect with us

Dvgsuddi Kannada | online news portal | Kannada news online

ಹರಪನಹಳ್ಳಿ ತಾಲ್ಲೂಕು ಗ್ರಾಮಾಂತರ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 6 ಶಿಕ್ಷಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಸರ್ಕಾರಿ ವೇತನ

ದಾವಣಗೆರೆ

ಹರಪನಹಳ್ಳಿ ತಾಲ್ಲೂಕು ಗ್ರಾಮಾಂತರ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 6 ಶಿಕ್ಷಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಸರ್ಕಾರಿ ವೇತನ

ದಾವಣಗೆರೆ: ಹರಪನಹಳ್ಳಿ ತಾಲ್ಲೂಕು ಗ್ರಾಮಾಂತರ ವಿದ್ಯಾಸಂಸ್ಥೆ (ರಿ.)ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು, ಐವಾನ್-ಎ-ಶಾಹಿ ಬಡಾವಣೆ, ಕಲಬುರಗಿ ಇವರ ಆದೇಶ 23/2022-23, ದಿನಾಂಕ : 24.03.2023 ಅನ್ವಯ ಸಂಸ್ಥೆಯ ಆಶ್ರಯದಡಿಯಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಯೋಮಿತಿ ಮತ್ತು ವೇತನವು ಸರ್ಕಾರಿ ಆದೇಶ ಮತ್ತು ಇಲಾಖೆ ನಿಯಮಾನುಸಾರವಾಗಿರುತ್ತದೆ.

  • ಹುದ್ದೆ ವಿವರ
  • ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿ ಕೆ.ಬಿ.ಜಿ. ಪ್ರೌಢಶಾಲೆಯ ಆಂಗ್ಲ ಭಾಷೆ, ಹಿಂದಿ ಭಾಷೆ, ಕನ್ನಡ ಪಂಡಿತ ತಲಾ ಒಂದು ಹುದ್ದೆ
  • ಹರಪನಹಳ್ಳಿ ತಾಲ್ಲೂಕಿನ ಆರ್.ಹೆಚ್.ಸಿ. ಪ್ರೌಢಶಾಲೆ, ಬಾಗಳಿಯಲ್ಲಿ ಕನ್ನಡ ಪಂಡಿತ, ಕನ್ನಡ ಕಲಾ ಶಿಕ್ಷಕ ಭರ್ತಿ
  • ಹರಪನಹಳ್ಳಿ ತಾಲ್ಲೂಕಿನ, ಜನತಾ ಪ್ರೌಢಶಾಲೆ, ಹಿರೇಮೇಗಳಗೆರೆಯಲ್ಲಿ ಆಂಗ್ಲ ಭಾಷೆ ಶಿಕ್ಷಕರಿಗೆ ಅರ್ಜಿ ಆಹ್ವಾನ
  • ಒಟ್ಟು ಶಿಕ್ಷಕ ಹುದ್ದೆಗಳು 06
  • ಅರ್ಹತೆ; ಬಿಎ, ಬಿಇಡಿ

ಅರ್ಹ ಅಭ್ಯರ್ಥಿಗಳು ತಮ್ಮ ಪೂ ರ್ಣ ಮಾಹಿತಿಗಳೊಂದಿಗೆ ಜಾಹೀರಾತು ನೀಡಿದ 21 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ತದನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಪ.ಜಾ ಮತ್ತು ಪ.ಪಂ. ಅಭ್ಯರ್ಥಿಗಳು ರೂ. 1000/-ಗಳು ಹಾಗೂ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳು ರೂ. 2000/-ಡಿಡಿಯನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಮೂಲ ಡಿಡಿಯನ್ನು ಲಗತ್ತಿಸಿ ಕಾರ್ಯದರ್ಶಿಗಳು, ಹರಪನಹಳ್ಳಿ ಗ್ರಾಮಾಂತರ ವಿದ್ಯಾಸಂಸ್ಥೆ (ರಿ.) ಹರಪನಹಳ್ಳಿ, ಮನೆ ನಂ. 1, ವಾರ್ಡ್‌ ನಂ. 1, ಹಳೇ ಹೌಸಿಂಗ್ ಬೋರ್ಡ್‌ ಕಾಲೋನಿ, ಜೋಯಿಸರ ಕೆರೆ, ಹರಪನಹಳ್ಳಿ-583131, ವಿಜಯನಗರ ಜಿಲ್ಲೆ, ಇವರಿಗೆ ಕಳುಹಿಸಬೇಕು.

ಅರ್ಜಿಯ ಪ್ರತಿಯೊಂದನ್ನು ಮಾನ್ಯ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯನಗರ, ಇವರಿಗೆ ಸಲ್ಲಿಸಬೇಕು. ಸಂದರ್ಶನ ದಿನಾಂಕವನ್ನು ಮುಂದೆ ತಿಳಿಸಲಾಗುವುದು. ತಮ್ಮ ಅರ್ಜಿಯೊಂದಿಗೆ ಸಂಪೂರ್ಣ ವಿಳಾಸ, ಮೊಬೈಲ್ ನಂ. ನಮೂದಿಸಲು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top