ಡಿವಿಜಿ ಸುದ್ದಿ ತುಮಕೂರು : ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, 30 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಪರಿಹಾರಕ್ಕಾಗಿ ಮನವಿ ಮಾಡಿದ್ದರೂ, ಸೂಕ್ತ ಪರಿಹಾರ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರೈತ ಸಮಾವೇಶದಲ್ಲಿ ಪ್ರಧಾನಿಗೆ ಒತ್ತಾಯಿಸಿದರು.
ತಮಕೂರಿನ ರೈತ ಸಮಾವೇಶದಲ್ಲಿ ಎಂಟು ಮಂದಿ ರೈತರಿಗೆ ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರೆ ಪರಿಹಾರಕ್ಕಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ನೀರಾವರಿಗೆ 50 ಸಾವಿರ ಕೋಟಿ ಅನುದಾನದ ಅಗತ್ಯವಿದೆ. ಅದನ್ನು ಪ್ರಧಾನಿ ಪೂರೈಸಬೇಕು. ರಾಜ್ಯದಲ್ಲಿ ನೆರೆ ಉಂಟಾಗಿ ಮನೆ, ಕೃಷಿ ಭೂಮಿ, ರಸ್ತೆಗಳೆಲ್ಲವೂ ಹಾಳಾಗಿದ್ದು, ಅಂದಾಜು 30 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಈ ವಿಚಾರವನ್ನು ನಿಮ್ಮ ಗಮನಕ್ಕೆ ತರಲಾಗಿದೆ. ಹಲವು ಬಾರಿ ನಿಯೋಗ ತೆರಳಿ ನೆರೆ ಪರಿಹಾರ ಕೋರಿದ್ದೇವೆ. ನಮಗೆ ಸಿಕ್ಕ ಪರಿಹಾರ ಕಡಿಮೆ. ಹೆಚ್ಚಿನ ಪ್ರಮಾಣದಲ್ಲಿ ನೆರೆ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Watch Live! https://t.co/Q3QVXxTnrH
— PMO India (@PMOIndia) January 2, 2020
ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಜಲ ಸಂಕಷ್ಟ ೆದುರಾಗಿದೆ. ಇದನ್ನು ಪರಿಹರಿಸಲು ಅಟಲ್ ಭೂ ಜಲ ಮಿಷನ್ ಪರಿಚಯಿಸಲಾಗುವುದು. ಮೀನುಗಾರಿಕೆಯ ಮೂಲಸೌಕರ್ಯಕ್ಕಾಗಿ 7 ಸಾವಿರ ಕೋಟಿ ಮೀಸಲಿಡಲಾಗಿದೆ. ಕಾಫಿ ಬೆಳೆಯ ಪ್ಹಯಾಕಿಂಗ್ ನಿಂದ ಹಿಡಿದು ಮಾರುಕಟ್ಟೆ ವರೆಗೆ ಪ್ರೋತ್ಸಾಹ ನೀಡಿದ್ದೇವೆ. ರಬ್ಬರ್, ಅರಿಶಿಣ, ಮಸಾಲೆ ಪದಾರ್ಥಗಳ ರಫ್ತಿಗೆ ಆದ್ಯತೆ ನೀಡಿದ್ದೇವೆ.
ಇನ್ನು ದಕ್ಷಿಣ ಭಾರತದಲ್ಲಿ ತೆಂಗು, ಕಾಫಿ, ಗೋಡಂಬಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಬೆಳಗಾವಿಯನ್ನು ದಾಳಿಂಬೆ ಕ್ಲಸ್ಟರ್, ಚಿಕ್ಕಬಳ್ಳಾಪುರ, ಬೆಂಗಳೂರನ್ನು ಗುಲಾಬಿ, ಚಿಕ್ಕಮಗಳೂರನ್ನಿಉ ಕಾಫಿ ಕ್ಲಸ್ಟರ್ ಮಾಡುವ ಉದ್ದೇಶವಿದೆ ಎಂದರು. ಹೀಗೆ ಅರ್ಧ ಗಂಟೆಗಿಂತ ಹೆಚ್ಚು ಸಮಯ ಮಾತನಾಡಿದ ಪ್ರಧಾನಿ, ನೆರೆ ಪರಿಹಾರ ವಿಷಯವನ್ನೇ ಪ್ರಸ್ತಾಪಿಸಲಿಲ್ಲ.