ದಾವಣಗೆರೆ: ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿ. ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಹುದ್ದೆಗಳ ವಿವರ
- ವ್ಯವಸ್ಥಾಪಕರು; 1ಹುದ್ದೆ, ಸಾಮಾನ್ಯ
- ಲೆಕ್ಕಾಧಿಕಾರಿ; 1 ಹುದ್ದೆ, ಸಾಮಾನ್ಯ
- ಕಿರಿಯ ಸಹಾಯಕರ; 4 ಹುದ್ದೆ, ಸಾಮಾನ್ಯ
- ಅಟೆಂಡರ್ /ಸಿಪಾಯಿ; 2 ಹುದ್ದೆ, ಎಸ್ಟಿ 1, ಒಬಿಸಿ 1
ವಯೋಮಿತಿ: 35 ರಿಂದ 38 ವರ್ಷಗಳಾಗಿರಬೇಕು. ವೇತನ; ಮಾಸಿಕ 20 ಸಾವಿರದಿಂದ 36 ಸಾವಿರ, ವಿದ್ಯಾರ್ಹತೆ; ಅಂಗೀಕೃತ ಸಂಸ್ಥೆ, ವಿದ್ಯಾಲಯದಿಂದ ಹುದ್ದೆಗೆ ತಕ್ಕಂತೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪಡೆದಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಸೂಚನೆಗಳು : 1) ಮೇಲ್ಕಾಣಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-04-2023ರ ಸಂಜೆ 5-00 ಗಂಟೆಯೊಳಗೆ ಸಲ್ಲಿಸತಕ್ಕದ್ದು.
- 2) ಅಭ್ಯರ್ಥಿಗಳು ಅರ್ಜಿಗಳನ್ನು ಬ್ಯಾಂಕಿನ ಕೆಲಸದ ವೇಳೆಯಲ್ಲಿ ಅರ್ಜಿ ಶುಲ್ಕ ರೂ. 1000-00ಗಳನ್ನು ಮತ್ತು ಹಿಂದುಳಿದ ವರ್ಗ, ಪ.ಜಾ. ಮತ್ತು ಪ.ಪಂ. ಅಭ್ಯರ್ಥಿಗಳು ರೂ. 500-00ಗಳನ್ನು ಕೌಂಟರ್ನಲ್ಲಿ ಪಾವತಿಸಿ ಪಡೆದುಕೊಳ್ಳಬಹುದು.
- 3) ಅರ್ಜಿಯೊಂದಿಗೆ ಅಭ್ಯರ್ಥಿಯು ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿರಬೇಕು.
- 4) ವಿದ್ಯಾರ್ಹತೆಯ 1) ಮಾರ್ಕ್ಸ್ ಕಾರ್ಡ್‌ಗಳು 2) ಪದವಿ ಸರ್ಟಿಫಿಕೇಟ್ಗಳ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರಬೇಕು.
- 5) ವಿಳಾಸದ ದೃಢೀಕರಣ ಪ್ರತಿ (ಆಧಾರ್ ಕಾರ್ಡ್
- 6) ಹಾಲಿ ಕೆಲಸ ಮಾಡುತ್ತಿರುವ / ಈ ಹಿಂದೆ ಕೆಲಸ ಮಾಡಿದ ಸಂಸ್ಥೆಯಿಂದ ಅನುಭವ ದೃಢೀಕರಣ ಪತ್ರ
ಒದಗಿಸುವುದು. - 7) ಕಂಪ್ಯೂಟರ್ ಶಿಕ್ಷಣದಲ್ಲಿ ತೇರ್ಗಡೆ ಹೊಂದಿದ ದೃಢೀಕರಣ ಪ್ರತಿಗಳನ್ನು ಹಾಗೂ ಇತರೆ ಅರ್ಹತೆಗಳಿದ್ದಲ್ಲಿ ಅವುಗಳ ದಾಖಲೆ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕೊನೆಯ ದಿನಾಂಕ 20-4-2023ರ ಸಾಯಂಕಾಲ 5-00 ಗಂಟೆಯೊಳಗೆ ಬ್ಯಾಂಕ್ಗೆ ಸಲ್ಲಿಸತಕ್ಕದ್ದು.
- 8) ಅರ್ಜಿದಾರರು ತಪ್ಪು ಮಾಹಿತಿ ನೀಡಿದಲ್ಲಿ ಅಥವಾ ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತವಾಗುತ್ತವೆ.
ವಿಳಾಸ: ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿ. #1058/3-4, ಜಯದೇವ ಸರ್ಕಲ್ ಹತ್ತಿರ, ಲಾಯರ್ ರೋಡ್, ಕೆ.ಬಿ. ಬಡಾವಣೆ, ದಾವಣಗೆರೆ-577 002. ಫೋನ್ : 08192 257901/255875, 230304, e-mail : muruga.bank@yahoo.com.