ಡಿವಿಜಿ ಸುದ್ದಿ, ದಾವಣಗೆರೆ: ರಾಷ್ಟ್ರ ಮಟ್ಟದ ಎಸ್ ಜಿ ಎಫ್ ಐ ಹಾಗೂ ಖೇಲೋ ಇಂಡಿಯಾ ಖೋ-ಖೋ ಪಂದ್ಯಾವಳಿಗಳು ಉತ್ತರ ಪ್ರದೇಶದ ಡಿಯೋರಿಯಾ ಮತ್ತು ಅಸ್ಸಾಂ ರಾಜ್ಯದ ಗೌವಹಟಿಯಲ್ಲಿ ನಡೆಯಲಿದ್ದು ಈ ಪಂದ್ಯಾವಳಿಗಳಿಗೆ ಜಿಲ್ಲಾ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಜ.03 ರಿಂದ ಜ.07 ರ ವರೆಗೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆಯುವ 17 ವರ್ಷದೊಳಗಿನ ಬಾಲಕರ ಖೋ-ಖೋ ಪಂದ್ಯಾವಳಿ ಹಾಗೂ ಜ.15 ರಿಂದ ಜ.19 ರ ವರೆಗೆ ಅಸ್ಸಾಂ ರಾಜ್ಯ ಗೌವಹಟಿಯಲ್ಲಿ ನಡೆಯುವ 3ನೇ ರಾಷ್ಟ್ರ ಮಟ್ಟದ 17 ವರ್ಷದೊಳಗಿನ ಖೇಲೋ ಇಂಡಿಯಾ ಖೋ-ಖೋ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ರಾಜ್ಯ ಬಾಲಕರ ತಂಡಕ್ಕೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಎಸ್. ವೇಣುಗೋಪಾಲ್, ಗಜಾ ಚೌಹಾಣ್, ದರ್ಶನ್ ತಿಗಡಿ, ಲಂಕೇಶ, ಆಸೀಫ್ ಕನ್ನೂರ್ ಮತ್ತು ಶರೀಷ್ ಲಾಲಾಸಾಬ್ ಯಲಿಗಾರ್ ಆಯ್ಕೆಯಾಗಿದ್ಧಾರೆ.
ಈ ಕ್ರೀಡಾಪಟುಗಳಿಗೆ ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ತರಬೇತಿ ನೀಡಿದ್ದಾರೆ. ಪಂದ್ಯಾವಳಿಗಳಲ್ಲಿ ರಾಜ್ಯ ತಂಡವು ಉತ್ತಮ ಸಾಧನೆ ಮಾಡಿ, ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತರಲೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.



