ದಾವಣಗೆರೆ; ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಸೆಳೆಯಲು ಹಚುತ್ತಿದ್ದ 27,475 ರೂ ಮೌಲ್ಯದ 25 ಪ್ರೆಷರ್ ಕುಕ್ಕರ್‌ಗಳನ್ನು ನಗರದ ಆರ್‌ಎಂಸಿ ಯಾರ್ಡ್ ಪೊಲೀಸರುಜಪ್ತಿ ಮಾಡಿ, ಓರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಹೊರವಲಯದ ಆವರಗೆರೆ ಗ್ರಾಮದ ಈದ್ಗಾ ಮೈದಾನದ ಪಕ್ಕದ ಜಮೀನಿನಲ್ಲಿ ಕಳೆದ ಸೋಮವಾರ ರಾತ್ರಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 25
ಕುಕ್ಕರ್‌ಗಳನ್ನು ಖಚಿತ ಮಾಹಿತಿ ಮೇರೆದೆ ದಾಳಿ ನಡೆಸಿದ ಆರ್‌ಎಂಸಿ ಯಾರ್ಡ್ ಪೊಲೀಸರು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ.
ಕುಕ್ಕರ್ ಬಾಕ್ಸ್‌ಗಳ ಮೇಲೆ ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರ
ಭಾವಚಿತ್ರ ಹಾಗೂ ಕಾಂಗ್ರೆಸ್ ಪಕ್ಷದ ಗುರುತಿನ ಜೊತೆಗೆ ಎಸ್ಸೆಸ್ ಮತ್ತು ಎಸ್ಸೆಸ್ಸೆ೦ ಅಭಿಮಾನಿ ಬಳಗ ಎಂಬುದಾಗಿ ನಮೂದಾಗಿತ್ತು. ಬಾಕ್ಸ್‌ಗಳ ಮೇಲೆ ಇ೦ಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಟಿಕ್ಟರ್ ಸಹ ಅಂಟಿಸಿರುವುದು ಕಂಡು ಬಂದಿದೆ.
ಪ್ರಕರಣ ಸಂಬಂಧ ಎಲ್.ಕೆ. ಕರಿಗೌಡಪ್ಪ ಎಂಬುವರ ವಿರುದ್ಧ ಐಪಿಸಿ 171(ಇ) ಕಲಂನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿನ್ನೆಯಷ್ಟೇ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್ ಎಸ್ ಮತ್ತು ಎಸ್ ಎಸ್ ಎಂ ಅಭಿಮಾನ ಬಳಗದ ಹೆಸರಲ್ಲಿ ಮತದಾರರಿಗೆ ಅಕ್ರಮವಾಗಿ ಹಂಚಲು ಸಂಗ್ರಹಿಸಿದ್ದ 16.65 ಗೃಹ ಬಳಕೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ನಾಲಾಬಂದ್ ರಸ್ತೆಯಲ್ಲಿನ ಕಾಂಗ್ರೆಸ್ ಮುಖಂಡ ಮಾಲತೇಶ ಜಾಧವ್ ಎಂಬುವವರಿಗೆ ಸೇರಿದ ಶೆಡ್‍ನಲ್ಲಿ ಅಂದಾಜು ಮೌಲ್ಯ 16,65,630 ರೂಪಾಯಿ ಮೌಲ್ಯದ ನಿರ್ಲಾನ್ ಗೆಲಾಕ್ಸಿ 353 ರಟ್ಟಿನ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಕೊಂಬೊ ಪ್ಯಾಕ್ 244 ರಟ್ಟಿನ ಬಾಕ್ಸ್ ಸೇರಿ 597 ರಟ್ಟಿನ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆಯಾದ ಬಾಕ್ಸ್‌ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್‍ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಪ್ರೈಫ್ಯಾನ್, ಕ್ಯಾರೋಲ್, ವುಡ್ ಸ್ಟಿಕ್‍ಗಳು ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ದಾಸ್ತಾನು ಮಾಡಿದ ಶೆಡ್ಡಿನ ಮಾಲೀಕ ಮಾಲತೇಶ ಜಾಧವ್ ಎಂಬುವರು ಸ್ಥಳಕ್ಕೆ ಕರೆಸಿ, ಶೆಡ್ ಸೀಲ್ ಮಾಡಿ ಮಾಲೀಕನ ವಿರುದ್ಧ ಕಲಂ 171(ಇ) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



