ದಾವಣಗೆರೆ: ರೈತರಿಗೆ ಸಬ್ಸಿಡಿ ದರದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ 17 ಕೋಟಿ ವಂಚಿಸಿದ್ದ ಆರೋಪದ ಮೇರೆಗೆ ದಾವಣಗೆರೆ ನಗರದ ಮಂಡಿಪೇಟೆಯ ಯೂಕೋ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರನ್ನು ರಾಜ್ಯ ಅಪರಾಧ
ತನಿಖಾದಳ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ. ಮಂಡಿಪೇಟೆಯ ಖಾಸಗಿ ಬ್ಯಾಂಕ್ ಆದ ಯೂಕೋ ಬ್ಯಾಂಕ್‌ನ ವ್ಯವಸ್ಥಾಪಕ ಭಕ್ತಿಭೂಷಣ್, ಸಿಜಿಆರ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ರೆಡ್ಡಿ ಹಾಗೂ ಏಜೆಂಟ್ ಸಂತೋಷ್ ಬಂಧಿತರಾಗಿದ್ದು, ಇನ್ನು ಹೆಚ್ಚಿನ ಸಿಬ್ಬಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ. ಮೂರು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಸುಮಾರು 43 ರೈತರಿಗೆ ಸಬ್ಸಿಡಿ ನೆಪದಲ್ಲಿ ಆರೋಪಿಗಳು ವಂಚಿಸಿದ್ದರು. ಇತ್ತೀಚಿಗೆ
ಈ ಬ್ಯಾಂಕ್‌ನ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ಸಿಐಡಿ ಎಡಿಜಿಪಿ ಕೆ.ವಿ.ಶರತ್ ಚಂದ್ರ
ಮಾರ್ಗದರ್ಶನದಲ್ಲಿ ಎಸ್ಪಿ ಎಂ.ಡಿ.ಶರತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಡಿಕೆ ವ್ಯಾಪಾರ ನೆಪದಲ್ಲಿ ವಂಚನೆ; ಬಂಧಿತ ವಿವೇಕ ರೆಡ್ಡಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆತನ ಮೇಲೆ ವಂಚನೆ ಕೃತ್ಯಗಳು ದಾಖಲಾಗಿವೆ. ಈ ಹಿಂದೆ ರೆಡ್ಡಿ ವಿರುದ್ಧ ಸಿಐಡಿ ತನಿಖೆ ಸಹ ನಡೆದಿತ್ತು. ಅಡಿಕೆ ವ್ಯಾಪಾರ ನೆಪದಲ್ಲಿ ದಾವಣೆಗೆರೆ ಜಿಲ್ಲೆಗೆ ಪ್ರವೇಶಿಸಿದ ವಿವೇಕ್ ರೆಡ್ಡಿ, ‘ಸಿಜಿಆರ್’ ಹಾಗೂ ವಿನ್‌ವೇ’ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿದ್ದ. ತನ್ನ ಕಂಪನಿಗೆ ಕೆಲವು ಏಜೆಂಟ್‌ಗಳನ್ನು ಕೂಡಾ ರೆಡ್ಡಿನೇಮಿಸಿದ್ದ. ಅಡಿಕೆ ವ್ಯಾಪಾರದ ನೆಪದಲ್ಲಿ ರೈತರನ್ನು ಸಂಪರ್ಕಿಸಿ ಸಾಲಕೊಡಿಸುವುದಾಗಿ ನಂಬಿಸಿ ವಂಚಿಸುವುದು ಈತನ ಕೃತ್ಯವಾಗಿತ್ತು.
ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಅಣಜಿ ಸೇರಿದಂತೆ ನಾಲ್ಕು ಕಡೆ ಅಡಿಕೆ ಸಂಗ್ರಹಕ್ಕೆ ಗೋದಾಮುಸಹತೆರೆದಿದ್ದ ಗೋದಾಮಿನ ಹೊರನೋಟಕ್ಕೆ ಕಾಣುವಂತೆ ಮಾತ್ರ ಅಡಿಕೆ ತುಂಬಿದ್ದ. ಆದರೆ, ಗೋದಾಮುಗಳ ಒಳ ಭಾಗದಲ್ಲಿ ಖಾಲಿಯಾಗಿದ್ದವು. ಒಂದು ಕಡೆ ಉಗ್ರಾಣ ಇಲ್ಲದೆ ಇದ್ದರೂದಾಖಲೆಯಲ್ಲಿ ತೋರಿಸಿದ್ದರೆಡ್ಡಿ, ಕೊನೆಗೆ ಖಾಲಿ ಗೋದಾಮು ತೋರಿಸಿಯೇ ರೈತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೋಟ್ಯಾಂತರ ಸಾಲ ಪಡೆದು ವಂಚಿಸಿದ್ದೆ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.
2019ರಲ್ಲಿ ಯೂಕೋ ಬ್ಯಾಂಕ್‌ನಲ್ಲಿ 5 ಲಕ್ಷ ಸಾಲ ಕೊಡಿಸುತ್ತೇನೆ. ಇದರಲ್ಲಿ ನಿಮಗೆ 2 ಲಕ್ಷರು ಸಬ್ಸಿಡಿ ಹಣ ವಾಪಸ್ ಕೊಡುತ್ತಾರೆ ಎಂದು ನಂಬಿಸಿ ರೈತರಿಂದ ಪಹಣಿ, ಆಧಾರ್ ಕಾರ್ಡ್, ಐಡಿ ಕಾರ್ಡ್ ಅನ್ನು ಆರೋಪಿಗಳು ಸಂಗ್ರಹಿಸಿದ್ದರು.ರೆಡ್ಡಿ ಕೃತ್ಯಕ್ಕೆ ಯೂಕೋ ಬ್ಯಾಂಕ್‌ನ ವ್ಯವಸ್ಥಾಪಕ ಭಕ್ತಿಭೂಷಣ್, ಉದ್ಯೋಗಿಗಳಾದ ಸುನೀಲ್ ಹಾಗೂ ಸಿದ್ದೇಶ್ ಸಾಥ್ ಕೊಟ್ಟಿದ್ದರು.
ಈ ದಾಖಲೆ ಬಳಸಿ ಯೂಕೋ ಬ್ಯಾಂಕ್‌ನಲ್ಲಿ ಸಾಲ ಪಡೆದ ಆರೋಪಿಗಳು, ನಂತರ ರೈತರಿಗೆ ಸಬ್ಸಿಡಿಹಣ ಎಂದು ಹೇಳಿ1 ಲಕ್ಷ ರೂ. ನಿಂದ 50 ಸಾವಿರ ವರೆಗೆ ನಗದು ಹಣ ವಿತರಿಸಿದ್ದರು. ಆದರೆ ಬ್ಯಾಂಕ್‌ನ ಪಾಸ್‌ಬುಕ್‌ನಲ್ಲಿ ನಮೂದಾಗಿರುವ ಹಣವನ್ನು ರೈತರು ಪರಿಶೀಲಿಸಿದಾಗ ತಮ್ಮ ಹೆಸರಿನಲ್ಲಿ ತಲಾ48 ಲಕ್ಷದದಂತೆ ಒಟ್ಟು 17 ಕೋಟಿ ಸಾಲ ಪಡೆದಿರುವುದು ಗೊತ್ತಾಗಿದೆ.
ಈ ಹಣವನ್ನು ಸಿಜಿಆರ್ ಕ೦ಪನಿಗೆ ಆರ್‌ಟಿಜಿಎಸ್ ಮೂಲಕ ಯೂಕೋ ಬ್ಯಾಂಕ್ ವ್ಯವಸ್ಥಾಪಕ ಹಣ ವರ್ಗಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ರೈತರಿಗೆ ಅಂದು ತಪ್ಪು ಸರಿಪಡಿಸುವುದಾಗಿ ಹೇಳಿ ವ್ಯವಸ್ಥಾಪಕರು ಸಾಗ ಹಾಕಿದ್ದರು. ಆದರೆ 2020ರಲ್ಲಿ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್ ನೋಟಿಸ್ ನೀಡಿದ್ದರು. ಆಗ ರೈತರು ವಿಚಾರಿಸಿದಾಗ ಸಿಜಿಆರ್ ಕಂಪನಿ, ಅಣಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಯಾಗಳಹಳ್ಳಿಯ ಗ್ರಾಮದ ನಾಗರಾಜ್ ಎಂಬುವವರಿಗೆ ಸೇರಿದ ಅಡಿಕೆ ಗೋಡಾನ್‌ನಲ್ಲಿರುವ ಅಡಿಕೆ ಆಧಾರರದ ಮೇಲೆ ಮತ್ತು ಬೆಳೆ ಮೇಲೆ ಸಾಲ ಮಂಜೂರುಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.
4 ಜಿಲ್ಲೆಗಳ ರೈತರಿಗೆ ವಂಚನೆ 3 ವರ್ಷಗಳ ಬಳಿಕ ದಾಳಿ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ಆರೋಪಿಗಳು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕೆಲವು ದಾಖಲೆಗಳ ಸಂಗ್ರಹ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಮಹಾಮೋಸ ನಡೆದರೂ ಪೊಲೀಸರು ಸೂಕ್ತ ತನಿಖೆ ನಡೆಸಿರಲಿಲ್ಲ. ಹೀಗಾಗಿ ರೈತರ ಪ್ರತಿಭಟನೆಗೆ ಎಚ್ಚೆತ್ತ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ
ಹಸ್ತಾಂತರಿಸಿತು. ಇದೀಗ ಸಿಐಡಿ ಪ್ರಮುಖ ಆರೋಪಿಗಳನ್ನು ಸೆರೆ ಹಿಡಿದಿದೆ.