ದಾವಣಗೆರೆ: ಜಿಲ್ಲೆಯಲ್ಲಿ ತಡ ರಾತ್ರಿ ಭೀಕರ ಅಗ್ನಿ ಅವಗಢ ಸಂಭವಿಸದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಧಗಧಗ ಬೆಂಕಿ ಹೊತ್ತಿಕೊಂಡ ಉರಿದಿದೆ. ಭೀಕರ ಬೆಂಕಿಗೆ ಮೂರು ಮನೆಗಳು ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿದ್ದ ಚಿನ್ನಾಭರಣ, ಬಟ್ಟೆ ಅಗ್ನಿಗೆ ಅಹುತಿಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಶಾರ್ಟ್ ಶರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಕೊಂಡಿದೆ. ಈ ಪರಿಣಾಮ ಮೂರು ಮನೆಗಳು ಸುಟ್ಟು ಹೋಗಿವೆ. ಮನೆಯ ಮೇಲೆಯೇ ಹೈ ಟೆನ್ಷನ್ ವೈರ್ ಹಾದು ಹೋಗಿದ್ದು, ಈ ವೈರ್ ನಿಂದ ಬೆಂಕಿ ಕಿಡಿ, ಮನೆ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸುದ್ದಾರೆ. ಇನ್ನೂ ಮನೆ ಕಳೆದುಕೊಂಡವರ ಕಣ್ಣೀರು ಹಾಕಿತ್ತಿದ್ದಾರೆ.
ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು ಹೊರ ಓಡಿ ಬಂದಿದ್ದಾರೆ. ಈ ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.



