ದಾವಣಗೆರೆ: ಅಗ್ನಿ ಸಾಕ್ಷಿಯಾಗಿ ಮದುವೆಯಾದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿದ್ದು, ಬೆಣ್ಣೆನಗರಿ ಜನರು ಬಿಚ್ಚಿಬೀಳಿಸುವಂತಿದೆ. ಪ್ರಿಯಕರನ ಜತೆಗಿನ ಸಂಬಂಧಕ್ಕೆ ಅಡ್ಡವಾಗಿದ್ದ ತನ್ನ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ ಈಗ ಪೊಲೀಸ್ ಅತಿಥಿಯಾಗಿದ್ದಾಳೆ
ಫೆಬ್ರುವರಿ 28 ರಂದು ದಾವಣಗೆರೆ ನಗರದ ಕಬ್ಬೂರು ಬಸಪ್ಪ ನಗರದಲ್ಲಿ ಪ್ರಶಾಂತ ಎಂಬ ವ್ಯಕ್ತಿಯನ್ನ ಕೊಲೆಯಾಗಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಆರ್ಎಂಸಿ ಠಾಣೆ ಪೊಲೀಸರು, ಇದೀಗ ಕೊಲೆ ರಹಸ್ಯ ಭೇದಿಸಿದ್ದಾರೆ. ಕೊಲೆ ಮಾಡಿಸಿದ್ದು ಬೇರೆ ಯಾರು ಅಲ್ಲ ಸ್ವತಃ ಅಗ್ನಿ ಸಾಕ್ಷಿಯಾಗಿ ಮದುವೆಯಾದ ಪತ್ನಿ ಎಂಬ ಸತ್ಯ ಬಯಲಾಗಿದೆ.
ಪತ್ನಿ ರೇಣುಕಾ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದು ಪತಿಗೆ ಗೊತ್ತಾಗಿತ್ತು. ಈ ವಿಷಯಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪ್ರಶಾಂತ್ ಫೆಬ್ರುವರಿ 28 ರಂದು ಆತನ ಸ್ನೇಹಿತ ರಾಕೇಶ್ ಎಂಬಾತ ಬಂದು, ಒಂದು ಕಡೆ ಕೋಳಿ ಚೆನ್ನಾಗಿವೆ ಎಂದು ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ.
ಪತ್ನಿ ರೇಣುಕಾ ದಾವಣಗೆರೆ ತಾಲೂಕಿನ ಹದಡಿ ನಿವಾಸಿ. ಜೊತೆಗೆ ಮೂರು ವರ್ಷದ ಗಂಡು ಮಗ ಕೂಡ ಇದ್ದಾನೆ. ಮದುವೆಯಾಗಿ ನಾಲ್ಕು ವರ್ಷವಾಗಿದೆ. ಪ್ರಶಾಂತ್ನದ್ದು ಟೈಲ್ಸ್ ಕೆಲ್ಸ. ಕೈ ತುಂಬ ದುಡ್ಡು, ಆದ್ರೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಕೊಲೆಯಾದ ದಿನ ತನಗೆ ಎನು ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಕೊಲೆಯಾ ಒಂಬತ್ತು ದಿನಗಳ ಬಳಿಕ ಪೊಲೀಸ್ ವಿಚಾರಣೆಯಲ್ಲಿ ಸತ್ಯ ಗೊತ್ತಾಗಿದೆ.ಪೊಲೀಸರು ಪ್ರಶಾಂತ್ ಪತ್ನಿ ರೇಣುಕಾ ಹಾಗೂ ಅವಳ ಪ್ರೀಯಕರ ರಾಕೇಶ್ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.



