ದಾವಣಗೆರೆ: ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 16 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಕಾಲೇಜಿಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು: ಡಾ.ಜೆ.ಆರ್. ಪವಿತ್ರ ಎಂ.ಡಿ. ಡಿವಿಎಲ್ (ಪ್ರಥಮ ರ್ಯಾಂಕ್), ಡಾ. ಹೊಸಳ್ಳಿ ಅಮೃತ (ಐದನೇ ರ್ಯಾಂಕ್), ಡಾ. ಎಂ.ಎಸ್. ರಾಕೇಶ್ ಎಂ.ಡಿ -ಎಮರ್ಜೆನ್ಸಿ ಮೆಡಿಷನ್ (ಮೂರನೇ ರ್ಯಾಂಕ್), ಡಾ. ಕೃಪ ಜೆಜೆಎಂ ಮೆಡಿಕಲ್ ಕಾಲೇಜಿಗೆ 16 ರ್ಯಾಂಕ್ ಗೋಪಾಲ್ (ಐದನೇ ರ್ಯಾಂಕ್ ಡಾ. ದೀಪ್ತಿ ಅನು ಎಂ.ಡಿ – ಪ್ಯಾಥಾಲಜಿ (ಎಂಟನೇ ರ್ಯಾಂಕ್) , ಡಾ. ಅಶ್ವಿನಿ ಲಾಡ್ ಎಂಡಿ -ಸೈಕ್ಯಾಟ್ರಿ (ಆರನೇ ರ್ಯಾಂಕ್), ಡಾ. ವಿಷ್ಣು ಎಂಡಿ- ಜನರಲ್ ಸರ್ಜರಿ (ಹತ್ತನೇ ರ್ಯಾಂಕ್).
ಯು.ಜಿ. ರ್ಯಾಂಕ್ ಪಡೆದವರು: ವಿಕ್ಟರ್ ಥಾಮಸ್ ಎಸ್.ವಿ., ಆರ್.ಎ. ಅನಘ, ಜಿ. ಪೂಜಾ, ಕೆ. ರವೀನಾ ಚೌಧರಿ, ಜಿ.ಎಸ್. ರಕ್ಷಿತಾ, ವಿಕಾಸ್ ಸಿಂಗ್, ವಿನ್ಸನ್, ಸಿಂಧು ಎ.ಎಸ್., ರಿಷಿತ್ ಶಿವಕುಮಾರ್, ರಕ್ಷಕ್ ಗುಂಟೆ. ಕಾಲೇಜಿನ ಛೇರ್ಮನ್ ಶಾಮನೂರು ಶಿವಶಂಕರಪ್ಪ, ಬಾಪೂಜಿ ಆಸ್ಪತ್ರೆಯ ಛೇರ್ಮನ್ ಎಸ್. ಎಸ್.ಮಲ್ಲಿಕಾರ್ಜುನ್, ಆಡಳಿತ ಮಂಡಳಿ,
ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್ , ವಿದ್ಯಾರ್ಥಿಗಳನ್ನು ಅಭಿನಯಿಸಿದ್ದಾರೆ.