ಡಿವಿಜಿ ಸುದ್ದಿ, ಬೆಂಗಳೂರು: ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಪಕ್ಷದ ನಾಯಕರು ಬಹಿರಂಗ ಹೇಳಿಕೆ ಕೊಡುವುದಕ್ಕಿಂತ ಕಾನೂನಾತ್ಮಕ ಕ್ರಮ ಬಳಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಪೌರತ್ವದ ಪ್ರತಿಭಟನೆಯಿಂದ ಕಂಗೆಟ್ಟಿರುವ ಬಿಜೆಪಿಗೆ ಎಚ್ಚರಿಕೆ ಹೆಜ್ಜೆ ಹಿಡಲು ಮುಂದಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಗೆ ಸಿಎಂ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಏಸು ಪ್ರತಿಮೆ ವಿರುದ್ಧ ಧ್ವನಿ ಎತ್ತಿ ಸಮಸ್ಯೆ ಸೃಷ್ಠಿಸಿಕೊಳ್ಳುವುದು ಬೇಡ. ಸರ್ಕಾರಿ ಗೋಮಾಳ ಜಮೀನು ಕಾನೂನಾತ್ಮಕವಾಗಿ ಇದೆಯೋ ಇಲ್ಲವೋ ನೋಡೋಣ. ಈಗಾಗಲೇ ವರದಿ ಕೇಳಿದ್ದು, ಜಿಲ್ಲಾಧಿಕಾರಿ ವರದಿ ಕೊಟ್ಟ ಬಳಿಕ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ಸುಮ್ಮನೆ ಆಗೋಣ. ವಿಷಯ ದೊಡ್ಡದು ಮಾಡಿ ಡಿಕೆಶಿ ಹಾಗೂ ಕಾಂಗ್ರೆಸ್ ಲಾಭ ಮಾಡಿಕೊಡೋದು ಬೇಡ ಎಂದಿದ್ದಾರೆ.
ರಾಮನಗರ ಜಿಲ್ಲೆ ಕಪಾಲಿ ಬೆಟ್ಟದ ಜಮೀನು ವಿವಾದದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ, ಆ ಪ್ರಸ್ತಾವನೆಯೂ ಇವತ್ತಿನ ಸಂಪುಟದಲ್ಲಿ ಇರಲಿಲ್ಲ ಅಂತಾ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.



