ಡಿವಿಜಿ ಸುದ್ದಿ, ಚಿತ್ರದುರ್ಗ: ಭಾರತೀಯ ಭಾಷಾ ಪರಂಪರೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಇಂತಹ ಕನ್ನಡ ಸಾಹಿತ್ಯ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಸಾಹಿತಿ ಬಳ್ಳಾರಿ ರೇವಣ್ಣ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಪತ್ರಕರ್ತರ ಭವನದಲ್ಲಿ ಸಿರಿಗನ್ನಡ ವೇದಿಕೆ, ವೀಣಾಪಾಣಿ ಸಂಸ್ಥೆ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಸಿರಿಗನ್ನಡ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ವಿಶೇಷ ಚೇತನ ದಿನಾಚರಣೆ ಹಾಗು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಮನದಾಳದಿಂದ ಹುಟ್ಟಬೇಕು. ಮನಸಿನಲ್ಲಿ ಹುಟ್ಟಿದನ್ನು ಹಾಗೆಯೇ ಬರೆಯಬೇಕು . ಪ್ರಸ್ತುತ ಕಾಲಘಟ್ಟದ ವಿಚಾರಗಳನ್ನು ಸಾಹಿತ್ಯದ ಮೂಲಕ ಹಿಡಿದಿಟ್ಟಾಗ ಹೆಚ್ಚು ಪ್ರಚಲಿತವಾಗಲಿದೆ ಎಂದರು.
ಬೇರ್ಯ ರಾಮಕುಮಾರ್ ಮಾತಾಡಿ, ಅಂಗವಿಕಲರ ಪರವಾಗಿ ಹೋರಾಟ ಮಾಡೋಣ ಎಂದರು. 35 ಕವಿಗಳು ಕವಿತೆ ವಾಚನ ಮಾಡಿದರು. 11 ಜನ ಜನಪದ ಗೀತೆ ಹಾಡಿದರು. ಅಧ್ಯಕ್ಷತೆಯನ್ನು ಕೆ.ಎಂ. ವೀರೇಶ್ ವಹಿಸಿದ್ದರು. ಗೀತ ಭರಮಸಾಗರ ,ಜೋತಿ ಸಿರಿಗೆರೆ ನಿರೂಪಿಸಿದರು.



