ದಾವಣಗೆರೆ: ವಿಜಯನಗರ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿಯಿಂದ ದಾವಣಗೆರೆ- ಹೊಸಪೇಟೆ ಮಾರ್ಗದಲ್ಲಿ ಫೆ. 15ರಿಂದ 20ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
ಐತಿಹಾಸಿಕ ಕೊಟ್ಟೂರು ಜಾತ್ರೆ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ಇಲಾಖೆಯು ಹುಬ್ಬಳ್ಳಿಯಿಂದ ಹೊಸಪೇಟೆಗೆ ರೈಲು ಬಿಡುವುದಾಗಿ ಟ್ವೀಟ್ ಮಾಡಿದೆ.
ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 07339/07340) ಹುಬ್ಬಳ್ಳಿ- ದಾವಣಗೆರೆ-ಹೊಸಪೇಟೆ-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಲಿವೆ. ರೈಲು ಸಂಖ್ಯೆ – 07339 ಹುಬ್ಬಳ್ಳಿಯಿಂದ ಬೆಳಿಗ್ಗೆ 6:15ಕ್ಕೆ ಹೊರಟು, ಹೊಸಪೇಟೆಗೆ ಮದ್ಯಾಹ್ನ 1:45ಕ್ಕೆ ತಲುಪಲಿದೆ. ರೈಲು ಸಂಖ್ಯೆ- 07340 ಹೊಸಪೇಟೆಯಿಂದ ಮದ್ಯಾಹ್ನ 3 ಗಂಟೆಗೆ ಹೊರಟು ಹುಬ್ಬಳ್ಳಿಯನ್ನು ರಾತ್ರಿ 10:50ಕ್ಕೆ ತಲುಪಲಿದೆ.
ಯಳವಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ತೊಳಹುಣಸಿ, ಅಮರಾವತಿ ಕಾಲೋನಿ, ತೆಲಗಿ, ಹಾರಣಹಳ್ಳಿ, ಬೆನೆಹಳ್ಳಿ, ಕೊಟ್ಟೂರು, ಮಾನವಿ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೋನಿ, ತುಂಗಭದ್ರಾ ಡ್ಯಾಮ್ ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ. ಈ ರೈಲು ಒಂಬತ್ತು ಜನರಲ್ ಕ್ಲಾಸ್ ಕೋಚ್‌ಗಳು ಹಾಗೂ ಎರಡು ಸೆಕೆಂಡ್ ಕ್ಲಾಸ್ ಕೋಚ್‌ಗಳನ್ನು ಹೊಂದಿರುತ್ತದೆ.



