ದಾವಣಗೆರೆ: ಭೀಕರ ಅಪಘಾತದಲ್ಲಿ ಜಿಲ್ಲೆಯ ಜಗಳೂರು ಪಟ್ಟಣದ ಚಳ್ಳಕೆರೆ ರಸ್ತೆ ಬೈಪಾಸ್ ಬಳಿ ವಿಜಯನಗರ ಜಿಲ್ಲೆಯ ಎಎಸ್ ಐ ಶಬೀರ್ ಹುಸೇನ್ (59) ಸಾವನ್ನಪ್ಪಿದ್ದಾರೆ. ಕೊಟ್ಟೂರಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕರ್ತವ್ಯದಲ್ಲಿದ್ದರು. ಹಂಪಿ ನಿವಾಸಿಯಾದ ಇವರು ಇಂದು ಬೆಳಗ್ಗೆ ಚಿತ್ರದುರ್ಗದ ತನ್ನ ಮಗಳ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ಜಗಳೂರಿನ ಚಳ್ಳಕೆರೆ ಬೈಪಾಸ್ ಬಳಿ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಎಎಸ್ ಐ ಶಬೀರ್ ಹುಸೇನ್ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರಗೆ ದಾಖಲಿಸಲಾಗಿದೆ. ಜಗಳೂರು ಪಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.