ದಾವಣಗೆರೆ: ಫೆ.10 ರಂದು ದಾವಣಗೆರೆ ತಾಲ್ಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಪುರವರ್ಗದ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ರಥೋತ್ಸವ ಕಾರ್ಯ ನಡೆಯಲಿದೆ.
ಫೆ. 05 ರಂದು ನಂದಿ ಧ್ವಜರೋಹಣ, ಕಂಕಣಧಾರಣೆ ನಡೆಯಲಿದೆ. ಫೆ. 6ರಂದು ರಾತ್ರಿ 09 ಗಂಟೆಗೆ ಬಸವೇಶ್ವರ ಆರೋಹಣ ಉತ್ಸವ, ಫೆ.07 ರಂದು ರಾತ್ರಿ 09 ಗಂಟೆಗೆ ಸರ್ಪಾರೋಹಣ ಉತ್ಸವ, ಫೆ.08 ರಂದು ರಾತ್ರಿ 08 ರಂದು ಕಳಸಾರೋಹಣ 9 ಗಂಟೆಗೆ ಅಶ್ವರೋಹಣ, ಫೆ. 09 ರಂದು ರಾತ್ರಿ ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿ ಆಗಮನವಾಗಲಿದೆ.
ಫೆ.10 ರಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಗಜಾರೋಹಣ ಉತ್ಸವ ನಡೆಯಲಿದ್ದು, ಸಂಜೆ ಸಂಜೆ 06 ಗಂಟೆಗೆ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಫೆ.11 ರಂದು ಬೆಳಗ್ಗೆ 08 ಗಂಟೆಗೆ ಗುಗ್ಗಳ ಸೇವೆ ಹಾಗೂ ರಾತ್ರಿ 10 ಗಂಟೆಗೆ ಓಕಳಿ ಸೇವೆ ಮತ್ತು ಗಂಗಾ ಪೂಜೆ, ವೀರಗಾಸೆ ನಡೆಯಲಿದೆ.



