ದಾವಣಗೆರೆ; ಮನೆ ಪಾಯ ತೆಗೆಯುವಾಗ ಬಂಗಾರ ಸಿಕ್ಕಿದೆ ಎಂಬ ಕಳ್ಳರ ಮಾತು ಕೇಳಿ ಬಂದವರು ಬರೋಬ್ಬರಿ 8 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಬಂಗಾರ ನೀಡುವುದಾಗ ನಂಬಿಸಿ ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಚನ್ನಗಿರಿ ಪೊಲೀಸರು 8ಲಕ್ಷ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಚನ್ನಗುರಿ ತಾಲ್ಲೂಕಿನ ಗೆದ್ದಲಹಟ್ಟಿ ಗ್ರಾಮದ ನಿವಾಸಿ ಗಣೇಶ (28) ಬಂಧಿತ ಆರೋಪಿಯಾಗಿದ್ದಾನೆ.
ಪ್ರಭಾಕರ ಎಂಬುವರಿಗೆ ಮನೆ ಪಾಯ ತೆಗೆಯುವಾಗ ಬಂಗಾರ ಸಿಕ್ಕಿದೆ ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದಾನೆ. ಆರೋಪಿಯ ಮಾತು ನಂಬಿ ಹಣ ತೆಗೆದುಕೊಂಡು ಬಂದ ಕೂಡಲೇ ಪ್ರಭಾಕರ ಅವರ ಆರೋಪಿ ಗಣೇಶ್ ಮತ್ತು ಅವನ ಗ್ಯಾಂಗ್ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು. ಪ್ರಭಾಕರ ದೂರಿನ ಮೇಲೆ ಆರೋಪಿ ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಸಂತೋಷ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಮಹೇಶ್ ಅವರ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್‌ಐ ಶಿವರುದ್ರಪ್ಪ ಎಸ್.ಮೇಟಿ ಹಾಗೂ ಸಿಬ್ಬಂದಿ ಮೈಲಾರಪ್ಪ, ಎಎಸ್‌ಐ, ಉಮೇಶ ವಿಟಿ, ಕೊಟ್ರೇಶ, ರವಿ, ರುದ್ರೇಶ, ಸತೀಶ, ಪರುಶುರಾಮ, ಸಂತೋಷ, ದೊಡ್ಡೇಶ್, ಮಂಜುನಾಥ, ಪ್ರಹ್ಲಾದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು. ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಅವರು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.



