ದಾವಣಗೆರೆ: ಶಾರ್ಟ್ ಸರ್ಕೀಟ್ ನಿಂದ ಪಾದರಕ್ಷೆ ಶಾಪ್ ಗೆ ಬೆಂಕಿ ಬಿದಿದ್ದು, 6 ಲಕ್ಷ ಮೌಲ್ಯದ ಪಾದರಕ್ಷೆ ಬೆಂಕಿಗೆ ಆಹುತಿಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ
ನಗರದ ಪಿ.ಬಿ. ರಸ್ತೆಯ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿಯ ಭಾಗ್ಯ ಫುಟ್ವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಪಾದರಕ್ಷೆಗಳು ಸುಟ್ಟು ಭಸ್ಮವಾಗಿವೆ.ನಾಗರಾಜ್ ಎಂಬುವರಿಗೆ ಸೇರಿದ ಮಳಿಗೆ ಇದಾಗಿದ್ದು, ರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿದ್ದ 6 ಲಕ್ಷ ಮೌಲ್ಯದ ಪಾದರಕ್ಷೆಗಳು ಬೆಂಕಿಗೆ ಸುಟ್ಟು ಹೋಗಿವೆ.



