ಬೆಂಗಳೂರು: ಕೆಎಸ್ ಆರ್ ಟಿಸಿ ವ್ಯಾಪ್ತಿಯ ಎಲ್ಲ ಜಿಲ್ಲಾ, ತಾಲ್ಲೂಕು ಬಸ್ ನಿಲ್ದಾಣದ ಹೊರಾಂಗಣದ ಹೋರ್ಡಿಂಗ್ಸ್ ಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಪರವಾನಿಗೆ ಪಡೆಯಲು ಸಂಧಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಧಾನವು ದಿನಾಂಕ 20-02-2023 ರಂದು ನಡೆಯಲಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ವ್ಯಾಪ್ತಿಯ ಪ್ಯಾಕೇಜ್ ಸಂಧಾನ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ತಾಲ್ಲೂಕು ಮಟ್ಟದ ಸಂಧಾನ ನಡೆಯಲಿದೆ. ಆಸಕ್ತ ಬಿಡ್ ದಾರರು ಕೆಎಸ್ ಆರ್ ಟಿಸಿ ವೆಬ್ ಸೈಟ್ www.KSRTC.Karnataka.govt.in ಗೆ ಭೇಟಿ ನೀಡಿ ಅರ್ಜಿ ಮತ್ತು ಇತರೆ ಪೂರಕ ದಾಖಲೆ ಡೌನ್ ಲೋಡ್ ಮಾಡಿಕೊಳ್ಳಬಹುದು.
ಅನುಬಂಧ 1, 2 ಗಮನದಲ್ಲಿ ಇಟ್ಟುಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪ್ಯಾಕೇಜ್ ದಾರರು ಅರ್ಜಿ ಶುಲ್ಕ ಮತ್ತು ಇಂಎಂಡಿ ಶುಲ್ಕವನ್ನು CAO /FA, KSARTC, bengaluru ಹೆಸರಲ್ಲಿ ಡಿ.ಡಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಡೆದು ಅರ್ಜಿ ಹೊಂದಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಸಂಚಾರ ಇಲಾಖೆ, ಕೆಎಸ್ ಆರ್ ಟಿಸಿ ನಿಗಮ ಕೇಂದ್ರ ಕಚೇರಿ, ಬೆಂಗಳೂರಲ್ಲಿ ಭಾಗವಹಿಸಬಹುದು.ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.



