ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆದ್ಯತಾ ಕಾರ್ಡ್ ದಾರರಿಗೆ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಜತೆ ಹೆಚ್ಚುವರಿ 1 ಅಕ್ಕಿಯನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ನೀಡಲಾಗುತ್ತಿದೆ. ಜನವರಿ ತಿಂಗಳ ಅಕ್ಕಿಯನ್ನು ಈಗಾಗಲೇ ಬಿಡುಗಡೆ ಮಾಡಿರುವುದರಿಂದ ಜನವರಿ ತಿಂಗಳ ಹೆಚ್ಚುವರಿ 1 ಕೆಜಿ ಅಕ್ಕಿಯನ್ನು ಫೆಬ್ರವರಿ ತಿಂಗಳಲ್ಲಿ ನೀಡಲಾಗಿವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಅಂತ್ಯೋದಯ ಕಾರ್ಡ್ ದಾರಿಗೆ (ಎಎವೈ) ಪ್ರತಿ ಕಾರ್ಡ್ 35 ಕೆ.ಜಿ ಅಕ್ಕಿ ,ಅಧ್ಯತಾ ಕಾರ್ಡ್ ದಾರರಿಗೆ (ಬಿಪಿಎಲ್ ) ಹೊಂದಿದವರಿಗೆ ಪ್ರತಿ ಸದಸ್ಯರಿಗೆ 05 ಕೆಜಿ ಅಕ್ಕಿ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ 1 ಕೆ.ಜಿಗೆ 15 ರೂಪಾಯಿಯಂತೆ ನೀಡಲಾಗುತ್ತಿದೆ. ಅಂತರ್ ರಾಜ್ಯ ಹಾಗೂ ಜಿಲ್ಲೆ ಪೋರ್ಟೆಬಿಲಿಟಿ ಜಾರಿ ಇರುವುದರಿಂದ ಯಾವುದೇ ವರ್ಗದ ಪಡಿತರ ಕಾರ್ಡ್ ದಾರರಿಗೆ ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಪಡಿಯತರ ಪಡೆಯಲು ಅವಕಾಶವಿದೆ.