ದಾವಣಗೆರೆ: 2022-23 ನೇ ಸಾಲಿನ ನೇರಸಾಲ ಯೋಜನೆ, ಉದ್ಯಮಶೀಲತಾ ಲಘು ಸರಕು ಸಾಕಾಣಿಕೆ ವಾಹನ ಮತ್ತು ದ್ವಿಚಕ್ರ ವಾಹನ ಯೋಜನೆಗಳಿಗೆ ಸಂಬಂಧಿಸಿದಂತೆ ಆನ್ ಲೈನ್ ಅರ್ಜಿ ಸಲ್ಲಿಸಲು ( ಸುವಿಧಾ/ಸೇವಾ ಸಿಂಧು/ಗ್ರಾಮ-ಒನ್/ ಕರ್ನಾಟಕ-ಒನ್ ಮತ್ತು ಬೆಂಗಳೂರು-ಒನ್ ಪೋರ್ಟಲ್ ಮುಖಾಂತರ ಸ್ವೀಕರಿಸಲು) ಜ.16 ವರೆಗೆ ಅವಧಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.