ದಾವಣಗೆರೆ: ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆ , ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮಾಜಿ ಸೈನಿಕರ ಮೀಸಲಾತಿ ಅಡಿಯಲ್ಲಿ ಖಾಲಿ ಇರುವ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಜಿ ಸೈನಿಕ ಮತ್ತು ಬಿ.ಎ. ಬಿ.ಇಡಿ. ವಿದ್ಯಾರ್ಹತೆ ಹೊಂದಿದ್ದು. ಅಭ್ಯರ್ಥಿಗಳು ಸಂಬಂಧಿತ ಶೈಕ್ಷಣಿಕ ಹಾಗೂ ಮಾಜಿ ಸೈನಿಕರ ಮೂಲ ದಾಖಲೆಗಳೊಂದಿಗೆ, ಜ. 05 ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ. 08182-220925 ಯನ್ನು ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.



