ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯದ ನಿರಂತರ ಮೀಸಲಾತಿ ಹೋರಾಟಕ್ಕೆ ಮಣಿದ ಸರ್ಕಾರ ಎಲ್ಲ ಲಿಂಗಾಯತ ಒಳ ಪಂಗಡಕ್ಕೆ 2ಡಿ, ಒಕ್ಕಲಿಗ ಸಮುದಾಯಕ್ಕೆ 2ಸಿ ಕೆಟಗರಿ ಸೃಷ್ಠಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಭೆಯ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಹೊಸದಾಗಿ 2 ಸಿ ಮತ್ತು 2 ಡಿ ಕೆಟಗರಿ ಸೃಷ್ಟಿಸಲಾಗಿದ್ದು, 3 ಎ ನಲ್ಲಿದ್ದ ಒಕ್ಕಲಿಗರಿಗೆ 2 ಸಿ ಮೀಸಲಾತಿ ನೀಡಲಾಗಿದೆ. 3 ಬಿ ನಲ್ಲಿದ್ದ ಲಿಂಗಾಯಿತರಿಗೆ 2 ಡಿ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ನೀಡಲು ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಪಂಚಮಸಾಲಿ ಸಮುದಾಯ ಜತೆ ಒಕ್ಕಲಿಗರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎರಡು ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕೆಟಗರಿ ಕಲ್ಪಿಸಲಾಗಿದೆ. ಯಾವುದೇ ಕೆಟಗರಿಯ ಮೀಸಲಾತಿ ಬದಲಾವಣೆ ಮಾಡಲಾಗಿಲ್ಲ. ಒಕ್ಕಲಿಗರಿಗೆ 2 ಸಿ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ. 2 ಎ, 2 ಬಿ ಮೀಸಲಾತಿ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.



