ದಾವಣಗೆರೆ: ನಗರದ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್ ನಲ್ಲಿ ವನ್ಯಜೀವಿ ಪತ್ತೆ ಪ್ರಕರಣದಲ್ಲಿ ಮಿಲ್ ಮಾಲೀಕರಾದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಮೊದಲ ಆರೋಪಿಯನ್ನಾಗಿ ಬಂಧಿಸಬೇಕು ಎಂದು ಬಿಜೆಪಿ ನಾಯಕರು ಅರಣ್ಯ ಇಲಾಖೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಜೆಪಿ ನಾಯಕರು ಇಂದು ಬೈಕ್ ರ‍್ಯಾಲಿ ಮುಖಾಂತರ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಸಚಿವರ ಬಂಧನಕ್ಕೆ ಆಗ್ರಹಿಸಿ ಭಿತ್ತಿಪತ್ರ ಮೂಲಕ ಜಿಲ್ಲಾ ಅರಣ್ಯ ಇಲಾಖೆ ಮುತ್ತಿಗೆ ಹಾಕಿದರು. ಸೂಕ್ತ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧವೂ ಘೋಷಣೆ ಕೂಗಿದರು. ಪ್ರತಿಭಟನಕಾರನ್ನು ಗೇಟ್ ಬಳಿಯೇ ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಲಾಯಿತು. ಬಿಜೆಪಿ ನಾಯಕರು ಜೋರಾಗಿ ನುಗ್ಗಿ ಒಳ ಪ್ರವೇಶಿಸ ಘೋಷಣೆ ಕೂಗಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ಈ ಪ್ರಕರಣದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಅವರು ಅಕ್ರಮವಾಗಿ ವನ್ಯಜೀವಿ ಸಾಕಾಣಿಕೆ ಮಾಡಿಲ್ಲವೆಂದರೆ, ಅನುಮತಿ ಪತ್ರವನ್ನಾದರೂ ತೋರಿಸಬೇಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಮಾಹಲಜಿ ಸಚಿವರನ್ನು ಎ1 ಆರೋಪಿಯನ್ನಾಗಿ ಮಾಡಿ, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್ ಟಿ ವೀರೇಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸ್ ಕಾರಿಯಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.



