ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನೊಬ್ಬ ಬರೋಬ್ಬರಿ 26 ಕೇಸ್ ಗಳಿಂದ ಒಮ್ಮೆಲೇ 16 ಸಾವಿರ ದಂಡ ಕಟ್ಟಿದ್ದಾನೆ.
ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮತ್ತು ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದನು. ಹೀಗಾಗಿ ಪೊಲೀಸರು ಒಮ್ಮಲೇ 16 ಸಾವಿರ ದಂಡ ಹಾಕಿದ್ದಾರೆ. ಕೆಎ 17 ಇ ಎಹೆಚ್ 0498 ನೋಂದಣಿಯ ದ್ವಿಚಕ್ರವಾಹನದ ವಿರೇಶ್ ಎಂಬುವರು 16 ಸಾವಿರ ದಂಡ ಕಟ್ಟಿದ ವ್ಯಕ್ತಿಯಾಗಿದ್ದಾರೆ.
ಒಟ್ಟು 26 ಕೇಸ್ಗಳಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ 23 ಸಲ ಹಾಗೂ ಚಾಲನೆಯಲ್ಲಿ ಮೊಬೈಲ್ ಬಳಕೆ 03 ಕೇಸ್ ದಾಖಲಾಗಿದ್ದವು. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ದಾವಣಗೆರೆ ಸಂಚಾರಿ ಠಾಣೆಯ ಪೊಲೀಸರ ಕೈಗೆ ಆಕಸ್ಮಿಕವಾಗಿ ಸಿಕ್ಕ ವಿರೇಶ್ ಗೆ ಒಮ್ಮೆಲೇ 26 ಕೇಸ್ಗಳಿಗೆ ಒಟ್ಟು 16 ಸಾವಿರ ದಂಡವನ್ನು ಕಟ್ಟಿಸಿಕೊಂಡಿದ್ದಾರೆ.
ಸರ್ಕಲ್ನಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ದಾಖಲಾಗಿತ್ತು. ಬೈಕ್ ಸವಾರ ಸಾಕಷ್ಟು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ಗೊತ್ತಾಗಿತ್ತು. ಈ ಬಗ್ಗೆ ಮನೆಗೆ ನೋಟಿಸ್ ಕಳುಹಿಸಿದ್ದರು. ಬೈಕ್ ಸವಾರ ದಂಡ ಕಟ್ಟಿರಲಿಲ್ಲ.



