ದಾವಣಗೆರೆ: ಆಕಸ್ಮಿಕ ತಗುಲಿದ ಬೆಂಕಿಯಿಂದಾಗಿ ಕಾಡು ಸೇರಿದಂತೆ ಮೆಕ್ಕೆ ಜೋಳ ರಾಶಿ ಸುಟ್ಟು ಭಸ್ಮವಾಗಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಬಾರಿಯ ಮಳೆ ಅತಿವೃಷ್ಟಿಯಿಂದಾಗಿ ಕಷ್ಟಪಟ್ಟು ರೈತರು ಒಳ್ಳೆಯ ಬೆಳೆದ್ದರು. ಆದರೆ, ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಮೆಕ್ಕೆ ಜೋಳ ಕೊಯ್ಲು ಮಾಡಿ ರಾಶಿ ಹಾಕಲಾಗಿತ್ತು. ಇನ್ನೂ ಸ್ವಲ್ಪ ಬೆಳೆ ಕೊಯ್ಲಿಗೆ ಬಾಕಿ ಉಳಿದಿತ್ತು. ಬೆಂಕಿಯಿಂದಾಗಿ ಬೆಳೆ ನಾಶ ಆಗಿದ್ದು ಮಾತ್ರವಲ್ಲ. ಜೊತೆಗೆ ಬಹಳಷ್ಟು ಅರಣ್ಯ ಪ್ರದೇಶವೂ ಹಾನಿಗಿದೆ. ಹೊನ್ನಾಳಿ ಮತ್ತು ಶಿವಮೊಗ್ಗ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ರೈತರ ಒತ್ತಾಯ ಮಾಡಿದ್ದಾರೆ.



