ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಉಚ್ಚoಗೆಮ್ಮನ ದೇವಸ್ಥಾನವು ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಇವತ್ತು ರಾತ್ರಿಯಿಂದ ನಾಳೆ ಬೆಳೆಗ್ಗೆ 11.30 ರವರೆಗೆ ಬಾಗಿಲು ಮುಚ್ಚಲಿದೆ. ತಹಸೀಲ್ದಾರ್ ಹಾಗೂ ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಇವರ ಆದೇಶದಂತೆ ಬಾಗಿಲು ಹಾಕಲಾಗುವುದು.
ನಾಳೆ ಬೆಳೆಗ್ಗೆ 11.30 ರ ನಂತರ ದೇವಸ್ಥಾನದಲ್ಲಿ ದೇವಿ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಯಲಿದೆ ಎಂದು ಎಂದು ಶ್ರೀ ಉತ್ಸವಾoಭ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶಿವಕುಮಾರ್ ಸ್ವಾಮಿ ತಿಳಿಸಿದ್ದಾರೆ.