ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕ್ ಹನುಮಂತಾಪುರ ಗೊಲ್ಲರಹಟ್ಟಿ ವೀರೇಶ ಎಂಬಾತ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಜಾಲದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಡಿವೈಎಸ್ ಪಿ ಕನ್ನಿಕಾ ಸಿಕ್ರಿವಾಲ್, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಬಿ ನೇತೃತ್ವದಲ್ಲಿ ಪಿ.ಎಸ್.ಐ ಭವ್ಯ ಡಿ.ಎಂ, ಎ.ಎಸ್.ಐ ಅಣ್ಣಯ್ಯ, ಹಾಗೂ ಸಿಬ್ಬಂದಿಯವರಾದ ಲೋಹಿತ್, ಮಲ್ಲಿಕಾರ್ಜುನ, ಗೋವಿಂದ್ ರಾಜ್, ನಾಗರಾಜ್ ಪಿ, ರವರನ್ನೊಳಗೊಂಡ ತಂಡ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ಅಕ್ರಮ ಗಾಂಜಾ ಮಾರಾಟ ಸಂಬಂಧ ಆರೋಪಿ ವಿರೇಶ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತನಿಂದ ಅಂದಾಜು 5,000/- ರೂ ಮೌಲ್ಯದ 208 ಗ್ರಾಂ ಗಾಂಜಾ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ 1 ಬೈಕ್ ಹಾಗೂ 1 ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಐಪಿಎಸ್ ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಗಿ ಪ್ರಶಂಸಿಸಿದ್ದಾರೆ.



