ದಾವಣಗೆರೆ: 10ನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರದ ಅರ್ಜಿಗಳನ್ನು ಆನ್ ಲೈನ್ ತಂತ್ರಜಾಲ ಮೂಲಕವೇ ಡಿ.31 ರೊಳಗೆ ಸಲ್ಲಿಸತಕ್ಕದ್ದು. ಪಿಹೆಚ್.ಡಿ/ಎಂ.ಫಿಲ್ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ನೇರವಾಗಿ ಆನ್‍ಲೈನ್‍ನಲ್ಲಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ ww.davangereuniversity.ac.in ನಲ್ಲಿ ನೀಡಲಾಗಿರುವ ನೋಂದಣಿ ಸಂಖ್ಯೆಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು(ಪರೀಕ್ಷಾಂಗ) ಕಾರ್ಯಾಲಯ ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ-577007 ದೂ.ಸಂ: 6363341215, 6363337901 ಹಾಗೂ 6363351762 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.



