ದಾವಣಗೆರೆ: ವಿಧಿ ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಇವತ್ತು ಬೆಣ್ಣೆನಗರಿ ದಾವಣಗೆರೆಗೆ ಮಂದಿಗೆ ಡಬಲ್ ಶಾಕ್..! ಒಂದೇ ದಿನ ನಗರದ ಪಿ.ಬಿ ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದೆ. ಈ ಅಪಘಾತರಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪಿಬಿ ರಸ್ತೆಯ ಗೋಕುಲ್ ಹೋಟೆಲ್ ಬಳಿ ಹರಿಹರದ ಕಡೆಯಿಂದ ಬರುತ್ತಿದ್ದ ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಯುವಕರಾದ ಜೀವನ ಕುಮಾರ್ (26), ದಯಾನಂದ(27) ಸ್ಥಲದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಇದೇ ಪಿಬಿ ರಸ್ತೆಯ ಜಿಎಂಐಟಿ ಕಾಲೇಜ್ ಬಳಿ ಮತ್ತೊಂದು ಅಪಘಾತವಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಅಂಜನೇಯ ಎನ್ನುವವರಿಗೆ ಗಭೀರ ಗಾಯವಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆ.ಎಸ್.ಆರ್.ಟಿ.ಸಿ ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಸ್ಥಳೀಯರ ಆರೋಪ. ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



