ದಾವಣಗೆರೆ: ರೈತರೊಬ್ಬರಿಗೆ ಇ-ಸ್ವತ್ತು ಮಾಡಿಕೊಡಲು ರೈತರಿಂದ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ತಾಲೂಕಿನ ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಒ ಲಿಂಗಾಚಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಇ-ಸ್ವತ್ತು ಮಾಡಿಕೊಡಲು ರೈತರಿಂದ 2 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.ದಾವಣಗೆರೆ ಆರ್ ಟಿ ಒ ಕಚೇರಿ ಬಳಿ ದಾಳಿ ನಡೆಸಿದ ಲೋಕಾಯುಕ್ತ ಎಸ್ ಪಿ ಎಂ.ಎಸ್ ಕೌಲಾಪುರೆ ರೆಡ್ ಹ್ಯಾಂಡ್ ಆಗಿ ಪಿಡಿಒ ಬಲೆಗೆ ಬೀಳಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಪಿಡಿಒ ವಶಕ್ಕೆ ಪಡೆದಿದ್ದಾರೆ.



