ದಾವಣಗೆರೆ: ಹರಿಹರ ತಾಲ್ಲೂಕಿನ ಬ್ಯಾಲದಹಳ್ಳಿ ಗ್ರಾಮದ ಎಲೆಬಳ್ಳಿ ತೋಟದಲ್ಲಿ ಬೆಳೆದಿದ್ದ ಒಟ್ಟು 4.800 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ 35,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಹರಿಹರ ತಾಲ್ಲೂಕು ಬ್ಯಾಲದಹಳ್ಳಿ ಗ್ರಾಮದ ಎನ್ ದೊರೆಯ್ಯ ಎಂಬುವರಿಗೆ ಸೇರಿದ ಎಲೆಬಳ್ಳಿ ಜಮೀನಿನಲ್ಲಿ ಅಬಕಾರಿ ಇಲಾಖೆ ದಾಳಿ ನಡೆಸಿದಾಗ 6 ರಿಂದ 9 ಅಡಿ ಎತ್ತರದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಲಾಗಿದೆ. ಅಬಕಾರಿ ಉಪಾಯುಕ್ತರ ಮಾರ್ಗದರ್ಶನದಲ್ಲಿ ನವಂಬರ್ 09 ರಂದು ಅಬಕಾರಿ ಉಪಧೀಕ್ಷಕ ರವಿ ಎಂ ಮರಿಗೌಡ್ರ, ಅಬಕಾರಿ ನಿರೀಕ್ಷಕರಾದ ಶೀಲಾ ಜೆ.ಕೆ, ಉಪ ನಿರೀಕ್ಷಕರಾದ ದೇವಸಿಂಗನಾಯ್ಕ್, ಪೇದೆಗಳಾದ ಜಗದೀಶ್, ಬೀರಪ್ಪ ಮಂಜುನಾಥ ಹಿರೇಮಠ, ಅರವಿಂದ ಹಾಗೂ ಪಂಚರೊಂದಿಗೆ ಖಚಿತ ಭಾತ್ಮಿ ಮೇರೆಗೆ ಹರಿಹರ ತಾಲ್ಲೂಕು ಬ್ಯಾಲದಹಳ್ಳಿ ಗ್ರಾಮದ ಎನ್ ದೊರೆಯ್ಯ ಗೆ ಸೇರಿದ ಎಲೆಬಳ್ಳಿ ಜಮೀನಿನಲ್ಲಿ ಅಬಕಾರಿ ದಾಳಿ ನಡೆಸಿದಾಗ 6 ರಿಂದ 9 ಅಡಿ ಎತ್ತರದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ಒಟ್ಟು 4.800 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ.
ಆರೋಪಿತ ಜಮೀನಿನ ಮಾಲೀಕರ ವಿರುದ್ದ ಮೊಕದ್ದಮೆಯನ್ನು ದಾಖಲಿಸಿದ್ದು, ಮಾಲೀಕನನ್ನು ತನಿಖಾ ಸಮಯದಲ್ಲಿ ಪತ್ತೆಹಚ್ಚಿ ಬಂಧಿಸಬೇಕಾಗಿರುತ್ತದೆ.ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಎನ್.ಡಿ.ಪಿ.ಎಸ್ ಪದಾರ್ಥಗಳ ಅಂದಾಜು ಮೌಲ್ಯ ರೂ.35000/-ಗಳಾಗಿರುತ್ತದೆ. ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದಾರೆ.