ದಾವಣಗೆರೆ: ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಭತ್ತದ ಬೆಳೆಯಲ್ಲಿ ಕಾಳು ಬಣ್ಣ ಕೆಡುವ ಶಿಲೀಂದ್ರ ರೋಗವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮುಂಜಾಗ್ರತಾ ಕ್ರಮವಾಗಿ ಹೊಡೆ/ತೆನೆ ಹಿರಿದ ಭತ್ತದ ಬೆಳೆಗೆ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯುಯ.ಪಿ. / ೦.6 ಗ್ರಾಂ ಟ್ರೈಂಯ ಸೈಕ್ಲೊಜೋಲ್ 75 ಡಬ್ಲ್ಯುಯ.ಪಿ. / 1 ಮಿ.ಲೀ. ಎಡಿಫಿನ್‌ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಎಕರೆಗೆ 250 ರಿಂದ 300 ಲೀಟರ್ ಸಿಂಪರಣಾ ದ್ರಾವಣ ಬೇಕಾಗುವುದು. ನೀರಿನೊಂದಿಗೆ ಸಗಣಿ ರಾಡಿಯನ್ನು ಬೆಳೆಗಳಿಗೆ ಹರಿಸುವುದರಿಂದ ರೋಗದ ಭಾದೆಯು ಕಡಿಮೆಯಾಗುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದರು.



