ದಾವಣಗೆರೆ: ಜಕಾತಿ ಟೆಂಡರ್ ಮಂಜೂರಾತಿ ನೀಡಲು 7 ಲಕ್ಷಕ್ಕೆ ಬೇಡಿಕೆ ಇಟ್ಟು, ಅದರಲ್ಲಿ 3 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಮಹಾನಗರ ಪಾಲಿಕೆ ಮ್ಯಾನೇಜರ್ ಸಿಕ್ಕಿ ಬಿದ್ದಿದ್ದಾನೆ.
ಮಹಾನಗರ ಪಾಲಿಕೆ ಮ್ಯಾನೇಜರ್ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿ ಆಗಿದ್ದಾರೆ. ಜಕಾತಿ ಟೆಂಡರ್ ಗೆ ನಿಡಲು ಕೃಷ್ಟಪ್ಪ ಎಂಬವರಿಗೆ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಲಕ್ಷ ಪಡೆದಿದ್ದರು.ಉಳಿದ 5 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆಗ ಕೃಷ್ಣಪ್ಪ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು 3 ಲಕ್ಷ ಕೊಡುತ್ತೇನೆ ಎಂದಿದ್ದರು.
ಆ ಮೂರು ಲಕ್ಷ ಹಣವನ್ನು ಪಾಲಿಕೆ ಕಚೇರಿಯಲ್ಲಿ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆಂಜನೇಯ ಹಾಗೂ ಇತರರು ದಾಳಿ ನಡೆಸಿದ್ದರು. ಈ ಲಂಚದ ಹಣದಲ್ಲಿ ಕೆಳ ವರ್ಗದಿಂದ ಮೇಲಾಧಿಕಾರಿ ವರೆಗೆ ಯಾರ ಪಾಲಿದೆ ಎಂಬುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ.



